ಡಿಕೆ ಬ್ರದರ್ಸ್ ಗೆ ಶಾಕ್ ನೀಡಿದ ಪ್ರಸನ್ನ ಚನ್ನಪಟ್ಟಣ ಸಂಭಾವ್ಯ ಅಭ್ಯರ್ಥಿ ಜೆಡಿಎಸ್ ಪಾಲು ಮೈಸೂರಲ್ಲಿ ಘೋಷಣೆ

ಪ್ರಸನ್ನ ಪಿ ಗೌಡ
ಪ್ರಸನ್ನ ಪಿ ಗೌಡ
Published on

ರಾಮನಗರ:  ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂದೇ ಬಿಂಬಿತವಾಗಿದ್ದ ಪ್ರಸನ್ನಗೌಡ ದಿಡೀರ್ ಬೆಳವಣಿಗೆಯಲ್ಲಿ ಜೆಡಿಎಸ್​ ಸೇರ್ಪಡೆಗೊಂಡಿದ್ದಾರೆ. 

ಕಾಂಗ್ರೆಸ್​ನ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಸ್ಥಾನ ಪಡೆಯುವಲ್ಲಿ ವಿಫಲವಾಗಿದ್ದ ಪ್ರಸನ್ನ ಅವರಿಗೆ ಎರಡನೇ ಪಟ್ಟಿಯಲ್ಲಿ ಸ್ಥಾನ ದೊರೆಯಲಿದೆ ಎನ್ನುವ ಖಾತ್ರಿಯಂತೂ ಸ್ಥಳೀಯ ಕಾರ್ಯಕರ್ತರಲ್ಲೂ ಇತ್ತು. ಆದರೆ ಭಾನುವಾರ ನಡೆದ ಬೆಳವಣಿಗೆಯಲ್ಲಿ ಮೈಸೂರಿನಲ್ಲಿ ನಡೆಯುತ್ತಿರುವ ಪಂಚರತ್ನ ಯಾತ್ರೆಯ ಸಮಾರೋಪ ಸಮಾರಂಭ ವೇದಿಕೆಯ ಮುಂಭಾಗ ನಡೆದ ಸುದ್ದಿಗೋಷ್ಠಿಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರೊಟ್ಟಿಗೆ ಕಾಣಿಸಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದರು. 

ಅಷ್ಟೇ ಅಲ್ಲದೆ, ತಾವು ಜೆಡಿಎಸ್​ ಸೇರ್ಪಡೆಗೊಳ್ಳುವುದನ್ನು ಅಧಿಕೃತವಾಗಿ ಘೋಷಣೆ ಮಾಡುವ ಮೂಲಕ ಡಿಕೆ ಸಹೋದರರಿಗೆ ಬಿಗ್ ಶಾಕ್ ನೀಡಿದ್ದಾರೆ. 

ಯಾವ ಕಾರಣಕ್ಕೆ ಜೆಡಿಎಸ್ ಸೇರ್ಪಡೆಗೊಂಡೆ ಎನ್ನುವ ವಿಚಾರವನ್ನು ಶೀಘ್ರವೇ ಸುದ್ದಿಗೋಷ್ಠಿಯಲ್ಲಿ ಬಹಿರಂಗಪಡಿಸುವುದಾಗಿಯೂ ಪ್ರಸನ್ನ ಮಾಹಿತಿಯನ್ನು ನೀಡಿದ್ದಾರೆ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net