

ಚನ್ನಪಟ್ಟಣ: ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಬಸ್ ಹತ್ತುವಾಗ ಇಬ್ಬರು ಮಹಿಳೆಯರು ಮಾಂಗಲ್ಯದ ಸರ ಕಳೆದುಕೊಂಡಿದ್ದಾರೆ.
ತಾಲೂಕಿನ ಹರೂರು ಗ್ರಾಮದ ಸುಶೀಲಮ್ಮ ಹಾಗೂ ಕನ್ನಸಂದ್ರದ ಉಮಾದೇವಿ ಮಾಂಗಲ್ಯ ಸರ ಕಳೆದುಕೊಂಡವರು.
ಇಬ್ಬರು ಮಹಿಳೆಯರು ನಗರದ ಸಂಬಂಧಿಕರ ಮನೆಗೆ ಬಂದು ಮರಳಿ ಗ್ರಾಮಕ್ಕೆ ಹಿಂದಿರುಗಲು ಬಸ್ ನಿಲ್ದಾಣದಲ್ಲಿ ಕುಡಿಕೆ-ಬೇವೂರು ಮಾರ್ಗದ ಬಸ್ ಹತ್ತಿದ್ದಾರೆ. ಬಸ್‌ನ ನೂಕುನುಗ್ಗಲಿನಲ್ಲಿ ಸುಶೀಲಮ್ಮನವರ ಕುತ್ತಿಗೆಯಲ್ಲಿದ್ದ 55 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರ ಹಾಗೂ ಉಮಾದೇವಿ ಅವರ 60 ಗ್ರಾಂನ ಮಾಂಗಲ್ಯ ಸರವನ್ನು ಕಳವು ಮಾಡಲಾಗಿದೆ. ಈ ಸಂಬಂಧ ಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.