ಚನ್ನಪಟ್ಟಣದಲ್ಲಿ ಸಂಚಾರ ಅಯೋಮಯ ರಸ್ತೆಗಳಲ್ಲಿ ವಾಹನಗಳ ಬೇಕಾಬಿಟ್ಟಿ ನಿಲುಗಡೆ

cpt Traffic problem
Published on

ಅಭಿಲಾಷ್​ ತಿಟ್ಟಮಾರನಹಳ್ಳಿ ಚನ್ನಪಟ್ಟಣ

ಬೊಂಬೆ ನಗರಿ ಚನ್ನಪಟ್ಟಣದಲ್ಲಿ ಸುಗಮ ಸಂಚಾರ ಎಂಬುದು ಆಯೋಮಯವಾಗಿದೆ. ಹೆದ್ದಾರಿ ಸೇರಿ ನಗರದ ಹಲವು ಕಡೆ ಸಂಚಾರ ಅವ್ಯವಸ್ಥೆ ತಾಂಡವವಾಡುತ್ತಿದ್ದು, ಸಂಚಾರ ಪೊಲೀಸರ ನಿಷ್ಕ್ರಿಯತೆಗೆ ಟೀಕೆ ವ್ಯಕ್ತವಾಗುತ್ತಿದೆ.

ಹೌದು, ನಗರದ ಹೆದ್ದಾರಿ ಸೇರಿ ಹಲವು ಕಡೆ ಸಂಚಾರ ವ್ಯವಸ್ಥೆ ಸರಿಯಾಗಿಲ್ಲ. ಸುಗಮ ಸಂಚಾರಕ್ಕೆ ಸಮಸ್ಯೆಗಳು ಕಾಡುತ್ತಿವೆ. ಹೆದ್ದಾರಿಯುದ್ದಕ್ಕೂ ಹಲವು ಕಡೆ ಬೇಕಾಬಿಟ್ಟಿಯಾಗಿ ವಾಹನಗಳು ನಿಲುಗಡೆಯಾಗುತ್ತಿದ್ದು, ಇದನ್ನು ಹತೋಟಿಗೆ ತರಬೇಕಾದ ಪೊಲೀಸರು ರ್ನಿಲ್ಯ ವಹಿಸಿರುವ ಕಾರಣ, ನಗರದಲ್ಲಿ ಸಂಚಾರ ಸಮಸ್ಯೆ ಸಾಮಾನ್ಯ ಎನಿಸಿದೆ.

ರಸ್ತೆಯಲ್ಲೆ ವಾಹನ ನಿಲುಗಡೆ!

ನಗರದ ಬೆಂಗಳೂರು&ಮೈಸೂರು ಹೆದ್ದಾರಿ, ಇತರ ಪ್ರಮುಖ ರಸ್ತೆಗಳಲ್ಲಿ ವಾಹನಗಳನ್ನು ರಸ್ತೆ ಮಧ್ಯದಲ್ಲಿಯೇ ನಿಲ್ಲಿಸಲಾಗುತ್ತಿದೆ. ಇದರಿಂದಾಗಿ ಇತರ ವಾಹನಗಳು ಹಾಗೂ ಸಾರ್ವಜನಿಕರ ಸಂಚಾರಕ್ಕೆ ಅಡಚಣೆಯಾಗಿದೆ. ಬೆಂಗಳೂರು & ಮೈಸೂರು ಹೆದ್ದಾರಿಯಲ್ಲಂತೂ ಈ ಸಮಸ್ಯೆ ದೊಡ್ಡದಾಗಿದೆ. ಹೆದ್ದಾರಿ ಬದಿಯ ಅಂಗಡಿಗಳ ಎದುರು ವಾಹನಗಳನ್ನು ನಿಲ್ಲಿಸುತ್ತಿದ್ದು, ಕೆಲವು ಕಡೆ ರಸ್ತೆಯ ಮಧ್ಯ ಭಾಗವನ್ನು ಆಕ್ರಮಿಸುತ್ತಿವೆ. ಇದರಿಂದಾಗಿ ಹಲವು ಸಮಸ್ಯೆಗಳು ಉದ್ಭವಿಸಿವೆ.

ವಿರುದ್ಧ ದಿಕ್ಕಿನ ಸಂಚಾರ ಹೆಚ್ಚು

ನಗರದಲ್ಲಿ ಹಾದುಹೋಗಿರುವ ಹೆದ್ದಾರಿಯಲ್ಲಿ ರಸ್ತೆ ಸುರತೆಗಾಗಿ ಈ ಹಿಂದೆ ಇದ್ದ ಹಲವು ರಸ್ತೆ ವಿಭಜಕಗಳನ್ನು ಮುಚ್ಚಲಾಗಿದೆ. ಈ ಹಿನ್ನೆಲೆಯಲ್ಲಿ ಹೆದ್ದಾರಿಯಲ್ಲಿ ರಸ್ತೆ ವಿಭಜಕಗಳು ವಿರಳವಾಗಿವೆ. ಈ ಕಾರಣದಿಂದಾಗಿ ಹೆದ್ದಾರಿಯಲ್ಲಿ ವಿರುದ್ಧ ದಿಕ್ಕಿನ ಸಂಚಾರ ಹೆಚ್ಚಾಗಿದೆ.

ಒಂದು ಬದಿಯಿಂದ ಮತ್ತೊಂದು ಬದಿಗೆ ತೆರಳುವವರು ರಸ್ತೆ ನಿಯಮಗಳನ್ನು ಉಲ್ಲಂಸಿ ಬೇಕಾಬಿಟ್ಟಿಯಾಗಿ ಸಂಚರಿಸುತ್ತಿದ್ದಾರೆ. ಸಮಯ ಹಾಗೂ ಪೆಟ್ರೋಲ್​ ಉಳಿತಾಯಕ್ಕಾಗಿ ರಸ್ತೆ ವಿಭಜಕ (ಡಿವೈಡರ್​) ಬಳಸದೆ, ಹೆದ್ದಾರಿ ಎನ್ನುವುದನ್ನು ಲೆಕ್ಕಿಸದೆ ಅಡ್ಡಾದಿಡ್ಡಿಯಾಗಿ ಸಂಚಾರ ಮಾಡುವುದು ಸಾಮಾನ್ಯ ಎನಿಸಿದೆ. ಇದು ಅಪಘಾತಗಳಿಗೆ ಕಾರಣವಾಗಿದೆ.

ನಗರದ ಸಿಪಿಟಿ ಗಾರ್ಡನ್​ ಬಳಿ ನಡೆದಿರುವ ಬಹುತೇಕ ಅಪಘಾತ ಪ್ರಕರಣಗಳಿಗೆ ವಿರುದ್ಧ ದಿಕ್ಕಿನ ಸಂಚಾರ ಕಾರಣ ಎನ್ನಬಹುದಾಗಿದೆ. ಚಿಕ್ಕಮಳೂರಿನಿಂದ ಚನ್ನಪಟ್ಟಣದ ಕಡೆ ವಿರುದ್ಧ ದಿಕ್ಕಿನಲ್ಲಿ ಸಂಚರಿಸುವುದು ಹೆಚ್ಚಾಗಿದೆ. ಇದೇ ರೀತಿ ಮಂಗಳವಾರಪೇಟೆಯಿಂದ ಹಿಡಿದು ಶೇರ್ವಾ ಸರ್ಕಲ್​ವರೆಗೂ ವಿರುದ್ಧ ದಿಕ್ಕಿನ ಸಂಚಾರ ಅತಿಯಾಗಿದೆ. ಇದನ್ನು ತಡೆಗಟ್ಟಲು ಸಂಚಾರ ಪೊಲೀಸರು ವಿಫಲಗೊಂಡಿದ್ದು, ಸಂಚಾರ ದುಸ್ತರ ಎನಿಸಿದೆ.

ದಂಡ ವಸೂಲಿಗೆ ಸೀಮಿತವಾದರಾ ಪೊಲೀಸರು!

ನಗರದ ಎಂ.ಜಿ. ರಸ್ತೆಯಲ್ಲಿ ಮಾತ್ರ ಸುಗಮ ಸಂಚಾರಕ್ಕಾಗಿ ಸಂಚಾರ ಪೊಲೀಸರು ಉತ್ತಮ ಕಾರ್ಯ ಹಮ್ಮಿಕೊಂಡಿದ್ದಾರೆ. ಈ ರಸ್ತೆಯಲ್ಲಿ ಒಂದು ದಿನ ಎಡ ಮತ್ತೊಂದು ದಿನ ಬಲಭಾಗದಲ್ಲಿ ಪಾರ್ಕಿಂಗ್​ ವ್ಯವಸ್ಥೆ ಕಲ್ಪಿಸಲಾಗಿದೆ. ಇದನ್ನು ಹೊರತುಪಡಿಸಿದರೆ, ನಗರದ ಬಹುತೇಕ ಕಡೆ ಸುಗಮ ಸಂಚಾರಕ್ಕೆ ಪೊಲೀಸರು ರ್ನಿಲ್ಯ ವಹಿಸಿರುವುದು ಎದ್ದುಕಾಣುತ್ತದೆ.

ದಂಡ ವಸೂಲಿಗೆ ನೀಡುವ ಪ್ರಾಮುಖ್ಯತೆಯನ್ನು ಸುಗಮ ಸಂಚಾರಕ್ಕೆ ನೀಡುತ್ತಿಲ್ಲ ಎಂಬ ದೂರುಗಳು ಸಾಮಾನ್ಯ ಎನಿಸಿವೆ. ನಗರದ ಹೆದ್ದಾರಿಯಲ್ಲಿ ಬೇಕಾಬಿಟ್ಟಿಯಾಗಿ ನಿಲುಗಡೆಯಾಗುವ ವಾಹನಗಳಿಗೆ ಬಿಸಿ ಮುಟ್ಟಿಸುವ ಜತೆಗೆ, ವಿರುದ್ಧ ದಿಕ್ಕಿನಲ್ಲಿ ಸಂಚರಿಸುವವರನ್ನು ತಡೆಗಟ್ಟುವಲ್ಲಿ ಸಂಚಾರ ಪೊಲೀಸರು ನಿಷ್ಕ್ರಿಯರಾಗಿದ್ದಾರೆ ಎನ್ನುವ ಆಕ್ರೋಶ ನಾಗರಿಕರಲ್ಲಿ ವ್ಯಕ್ತವಾಗುತ್ತಿದೆ. ಇನ್ನಾದರೂ, ಸಂಚಾರ ಪೊಲೀಸರು ನಗರದ ಸಂಚಾರ ಅವ್ಯವಸ್ಥೆ ಸರಿಪಡಿಸುವರೇ ಕಾದುನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net