ಅಪಘಾತವಾದ ಕಾರಿನಲ್ಲಿ ವಿದೇಶಿ ಕರೆನ್ಸಿ, ವಾಚ್​, ಮೊಬೈಲ್​ ಕಳವು

China Currency
Published on

ಚನ್ನಪಟ್ಟಣ: ಕಾರು ಅಪಘಾತದ ವೇಳೆ ಕಾರಿನಲ್ಲಿದ್ದ ನಗದು, ವಿದೇಶಿ ಕರೆನ್ಸಿ ಹಾಗೂ ವಸ್ತುಗಳನ್ನು ದೋಚಿರುವ ಟನೆ ಬೆಂ&ಮೈ ರಸ್ತೆಯ ತಾಲೂಕಿನ ಬೈರಾಪಟ್ಟಣ ಗ್ರಾಮದ ಕದಂಬ ಹೋಟೆಲ್​ ಬಳಿ ನಡೆದಿದೆ.

ಜು.23ರಂದು ಡಿವೈಡರ್​ಗೆ ಕಾರು ಡಿಕ್ಕಿ ಹೊಡೆದು ಅಪಘಾತ ಸಂಭವಿಸಿತ್ತು. ಕಾರಿನಲ್ಲಿದ್ದ ಇಬ್ಬರಿಗೆ ಗಾಯವಾಗಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ಈ ವೇಳೆ ಕಾರಿನಲ್ಲಿದ್ದ 55 ಸಾವಿರ ರೂ., 1 ಸಾವಿರಕ್ಕೂ ಹೆಚ್ಚು ಯುಎಸ್​ ಡಾಲರ್​ (1,47,000 ರೂ.), 500 ಪೌಂಡ್​ (53 ಸಾವಿರ ರೂ.), ಎರಡು ವಾಚ್​, ಒಂದು ಒನ್​ಪ್ಲಸ್​ ಮೊಬೈಲ್​, ಒಂದು ಪ್ಲಾಟಿನಂ ಉಂಗುರ ಸೇರಿ 2,55,000 ರೂ. ಮೌಲದ್ಯ ಹಣ ಹಾಗೂ ವಸ್ತುಗಳನ್ನು ಕಳವು ಮಾಡಲಾಗಿದೆ ಎನ್ನಲಾಗಿದೆ.

ನಾನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕಾರಣ ತಡವಾಗಿ ಬಂದು ದೂರು ನೀಡುತ್ತಿದ್ದೇನೆ ಎಂದು ಅಖಿಲ್​ ಎಂಬುವವರು ದೂರಿನಲ್ಲಿ ತಿಳಿಸಿದ್ದಾರೆ. ಚನ್ನಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net