ಹಳೇ ವಸ್ತುಗಳ ಹರಾಜಿನಲ್ಲಿ ಖರೀದಿಗೆ ಮುಗಿಬಿದ್ದ ಜನ

IMG-20230801-WA0078.jpg
Published on

ಚನ್ನಪಟ್ಟಣ

ಹಳೆಕಬ್ಬಿಣ ಖರೀದಿಗಾಗಿ ಜನತೆ ಮುಗಿಬಿದ್ದ ಪ್ರಸಂಗ ಚನ್ನಪಟ್ಟಣದಲ್ಲಿ ಮಂಗಳವಾರ ಕಂಡುಬಂದಿತ್ತು. ಗುಜರಿ ವಸ್ತುಗಳ ಖರೀದಿಗಾಗಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಲು ನೂಕುನುಗ್ಗಲು ಉಂಟಾಯಿತು.

ಚನ್ನಪಟ್ಟಣ ನಗರಸಭೆ ವತಿಯಿಂದ ನಗರಸಭೆ ಆವರಣದಲ್ಲಿ ಮಂಗಳವಾರ 2023-24 ನೇ ಸಾಲಿನ ಬಹಿರಂಗ ಹರಾಜು ಇಸ್ತಿಹಾರ್ ಹಮ್ಮಿಕೊಳ್ಳಲಾಗಿತ್ತು.

ಆರೋಗ್ಯ ಶಾಖೆಯ ನಿರುಪಯುಕ್ತ ವಸ್ತುಗಳಾದ 14 ಆಟೋ ಟಿಪ್ಪರ್, ಡಂಪರ್ ಪೆಸ್ಲರ್ ವಾಹನ, 38 ವಿವಿಧ ಬಗೆಯ ವಿದ್ಯುತ್ ಉಪಕರಣಗಳು, 62 ಕ್ಕೂ ಹೆಚ್ಚು ಕಬ್ಬಿಣದ ವಸ್ತುಗಳ ಹರಾಜಿಗೆ ಟೆಂಡರ್ ಕರೆಯಲಾಗಿತ್ತು. ಬೆಲೆಬಾಳುವ ವಸ್ತುಗಳ ಖರೀದಿಗೆ ಸಾಕಷ್ಟು ಪೈಪೋಟಿ ಆರಂಭಗೊಂಡಿದ್ದು, ಮುಂಜಾನೆಯಿಂದಲೇ ಟೆಂಡರ್ ನಲ್ಲಿ ಭಾಗವಹಿಸಲು ಠೇವಣಿ ಕಟ್ಟಲು ಮುಗಿಬಿದ್ದರು.

ಕೇವಲ ಚನ್ನಪಟ್ಟಣ ಅಲ್ಲದೇ ಅಕ್ಕಪಕ್ಕದ ಜಿಲ್ಲೆಯ ಜನತೆಯೂ ಸಹ ಟೆಡರ್ ನಲ್ಲಿ ಭಾಗವಹಿಸಲು ಆಗಮಿಸಿದ್ದು‌‌ ಸಾಕಷ್ಟು ಪೈಪೋಟಿ ‌ನಡೆದಿದೆ.

ದುಬಾರಿ ಬೆಲೆಯ ಗುಜರಿ ವಸ್ತುಗಳನ್ನು ಖರೀದಿಸಲು ಈ ಮಟ್ಟಿಗೆ ಪೈಪೋಟಿ ಕಂಡುಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net