ಮುದ್ರಾ ಯೋಜನೆಯಡಿ ಸಾಲ ಕೊಡಿಸುವುದಾಗಿ ನಂಬಿಸಿ ವಂಚನೆ

Cheating to retired bank employ
Published on

1.74 ಲಕ್ಷ ರೂ. ಕಳೆದುಕೊಂಡ ಚನ್ನಪಟ್ಟಣದ ಶಿವಕಾಳು


ರಾಮನಗರ: ಪ್ರಧಾನ ಮಂತ್ರಿ ಮುದ್ರಾ ಯೋಜನೆಯಡಿ ಸಾಲ ಕೊಡಿಸುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಗೆ ಆನ್​ಲೈನ್​ ಮೂಲಕವೇ ವಂಚನೆ ಮಾಡಿರುವ ಪ್ರಕರಣ ಸೈಬರ್​ ಕೆಂ ಠಾಣೆಯಲ್ಲಿ ದಾಖಲಾಗಿದೆ.

ಚನ್ನಪಟ್ಟಣದ ಚಿಕ್ಕಬೋರೇಗೌಡನದೊಡ್ಡಿ ಗ್ರಾಮದ ಶಿವಕಾಳು ಹಣ ಕಳೆದುಕೊಂಡವರು. ಜು.13ರಂದು ಶಿವಕಾಳು ಅವರ ಮೊಬೈಲ್​ಗೆ ಕರೆ ಬಂದಿದ್ದು ನಿಮಗೆ ಪಿಎಂ ಮುದ್ರಾ ಯೋಜನೆಯಡಿ 5 ಲಕ್ಷ ರೂ. ಸಾಲವನ್ನು ಕೊಡಿಸುವುದಾಗಿ ಹೇಳಿದ್ದಾರೆ. ನಂತರ ವಾಟ್ಸ್​ ಆ್ಯಪ್​ ಸಂಖ್ಯೆಗೆ ಎಲ್ಲ ದಾಖಲೆಗಳನ್ನು ಪಡೆದುಕೊಂಡಿದ್ದಾರೆ.

ಇದಾದ ನಂತರ ಕೋರ್ಟ್​ ಫೀ, ಖಾತೆ ಚಾರ್ಜ್​, ವಿಮೆ, ಇತರ ಖರ್ಚುಗಳು ಎಂದು ಒಟ್ಟು 1,74,800 ರೂ.ಗಳನ್ನು ಪಡೆದುಕೊಂಡಿದ್ದಾರೆ.
ನಂತರ ವಿಚಾರಿಸಿದರೆ ಸಾಲವೂ ಇಲ್ಲದೆ, ಕೊಟ್ಟ ಹಣವೂ ಇಲ್ಲದೆ ಮೋಸ ಹೋಗಿರುವುದು ಗೊತ್ತಾಗಿದೆ. ವಂಚನೆಗೊಳಗಾಗಿರುವ ಬಗ್ಗೆ ಸೈಬರ್​ ಪೊಲೀಸರಿಗೆ ಶಿವಕಾಳು ದೂರು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net