ಜೆಡಿಎಸ್ ತೆಕ್ಕೆಗೆ ಚನ್ನಪಟ್ಟಣ ಪಿಎಲ್‌ಡಿ ಬ್ಯಾಂಕ್ ಆಡಳಿತ

20230802_113705
Published on

ಗೋವಿಂದನಹಳ್ಳಿ ನಾಗರಾಜು ಅಧ್ಯಕ್ಷ, ಪ್ರಮೀಳಾ ಉಪಾಧ್ಯಕ್ಷೆ

ಚನ್ನಪಟ್ಟಣ
ತಾಲೂಕು ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ (ಪಿಎಲ್‌ಡಿ) ಬ್ಯಾಂಕ್‌ನ ಅಧ್ಯಕ್ಷರಾಗಿ ಜೆಡಿಎಸ್ ಮುಖಂಡ ಗೋವಿಂದನಹಳ್ಳಿ ನಾಗರಾಜು, ಉಪಾಧ್ಯಕ್ಷರಾಗಿ ಪ್ರಮೀಳಾ ವೆಂಕಟೇಶ್ ಅವಿರೋಧವಾಗಿ ಆಯ್ಕೆಯಾದರು.

ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಬ್ಯಾಂಕ್ ಆವರಣದಲ್ಲಿ ಬುಧವಾರ ಚುನಾವಣೆ ನಿಗದಿಯಾಗಿತ್ತು. ಈ ಎರಡು ಸ್ಥಾನಗಳಿಗೆ ಈ ಇಬ್ಬರನ್ನು ಹೊರತುಪಡಿಸಿ ಬೇರೆ ಯಾರೂ ನಾಮಪತ್ರ ಕಾರಣ ಚುನಾವಣಾಧಿಕಾರಿಗಳು ಅವಿರೋಧ ಆಯ್ಕೆಯನ್ನು ಘೋಷಿಸಿದರು.

ಬ್ಯಾಂಕ್‌ನ ಐದು ವರ್ಷಗಳ ಆಡಳಿತ ಮಂಡಳಿಯ 14 ನಿರ್ದೇಶಕರ ಆಯ್ಕೆಗೆ ಜು.23ರಂದು ಚುನಾವಣೆ ನಡೆದಿತ್ತು. ಜೆಡಿಎಸ್ ಪಕ್ಷದ 10 ಮಂದಿ ನಿರ್ದೇಶಕರಾಗಿ ಆಯ್ಕೆಯಾಗಿದ್ದರು. ಈ ಹಿನ್ನೆಲೆಯಲ್ಲಿ ಅಧ್ಯಕ್ಷ - ಉಪಾಧ್ಯಕ್ಷ ಸ್ಥಾನಗಳು ನಿರಾಯಾಸವಾಗಿ ಜೆಡಿಎಸ್ ಪಾಲಾದವು. ಈ ಮೂಲಕ ಮತ್ತೊಮ್ಮೆ ಬ್ಯಾಂಕ್ ಚುಕ್ಕಾಣಿ ಹಿಡಿಯುವಲ್ಲಿ ಜೆಡಿಎಸ್ ಸಲಗೊಂಡಂತಾಯಿತು.

ನೂತನ ಅಧ್ಯಕ್ಷ ಗೋವಿಂದನಹಳ್ಳಿ ನಾಗರಾಜು ಮಾತನಾಡಿ, ಎರಡನೇ ಬಾರಿಗೆ ಅಧ್ಯಕ್ಷನಾಗಿ ಆಯ್ಕೆಯಾಗಿರುವುದು ಸಂತಸ ತಂದಿದೆ. ನನ್ನ ಆಯ್ಕೆಗೆ ಸಹಕರಿಸಿದ ಸರ್ವ ಸದಸ್ಯರು ಮತ್ತು ಪಕ್ಷದ ನಾಯಕರಿಗೆ ಕೃತಜ್ಞತೆಗಳು. ಬ್ಯಾಂಕ್ ಅಭಿವೃದ್ಧಿಗೆ ನನ್ನದೇ ಆದ ಯೋಜನೆಗಳಿದ್ದು, ಸರ್ವರ ಸಹಕಾರದಿಂದ ಅವುಗಳನ್ನು ಜಾರಿ ಮಾಡಲು ಶ್ರಮಿಸುತ್ತೇನೆ ಎಂದು ತಿಳಿಸಿದರು.

ನೂತನ ಅಧ್ಯಕ್ಷ, ಉಪಾಧ್ಯಕ್ಷೆಯನ್ನು ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಕುಕ್ಕುರುದೊಡ್ಡಿ ಜಯರಾಂ, ಹಾಪ್‌ಕಾಮ್ಸ್ ನಿರ್ದೇಶಕ ಎಂ.ಎನ್.ರಾಜಶೇಖರ್, ಬ್ಯಾಂಕ್ ನಿರ್ದೇಶಕರಾದ ಮಾಗನೂರು ಗಂಗರಾಜು, ಡಿಎಂಕೆ ಕುಮಾರ್, ತಿಟ್ಟಮಾರನಹಳ್ಳಿ ಟಿ.ಪಿ.ಹನುಮಂತಯ್ಯ, ಮಳೂರುಪಟ್ಟಣ ಬೈರನರಸಿಂಹಯ್ಯ, ರೇವಹೆಗ್ಗಡೆ, ಎಸ್. ಸಿದ್ದರಾಜು, ಮದ್ದೂರಯ್ಯ, ಈಶ್ವರಯ್ಯ, ಚಿಕ್ಕೇನಹಳ್ಳಿ ಮೋಹನ್, ರಂಗರಾಜು, ಅಬ್ಬೂರುದೊಡ್ಡಿ ವೆಂಕಟೇಶ್, ಜಯಮ್ಮ, ಜೆಡಿಎಸ್ ಮುಖಂಡರಾದ ಮಳೂರುಪಟ್ಟಣ ರವಿ, ಮಂಕುಂದ ನಂದೀಶ್, ಗಂಗೇದೊಡ್ಡಿ ನಿಂಗೇಗೌಡ, ಬೋರೇಗೌಡ ಮುಂತಾದವರು ಅಭಿನಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net