

ಚನ್ನಪಟ್ಟಣ: ವೃದ್ಧೆಯೊಬ್ಬರ ಕುತ್ತಿಗೆಯಲ್ಲಿದ್ದ ೩೬ ಗ್ರಾಂ ತೂಕದ ಮಾಂಗಲ್ಯ ಸರವನ್ನು ಕಳವು ಮಾಡಿರುವ ಘಟನೆ ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಬುಧವಾರ ನಡೆದಿದೆ.
ತಾಲೂಕಿನ ಕೆಲಗೆರೆ ಗ್ರಾಮದ ನಿಂಗಮ್ಮ (70) ಮಾಂಗಲ್ಯ ಸರ ಕಳೆದುಕೊಂಡವರು. ಕಾರ್ಯನಿಮಿತ ನಗರಕ್ಕೆ ಬಂದಿದ್ದ ಇವರು ಗ್ರಾಮಕ್ಕೆ ಹಿಂದಿರುಗಲು ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಬಸ್ ಹತ್ತಿದ್ದು, ಬಸ್‌ನಲ್ಲಿ ಇವರ ಮಾಂಗಲ್ಯ ಸರವನ್ನು ಕಳುವ ಮಾಡಲಾಗಿದೆ.
ಈ ಸಂಬಂಧ ಪುರಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.