ನಾಪತ್ತೆಯಾಗಿದ್ದ ಮಹಿಳೆ ಶವವಾಗಿ ಪತ್ತೆ

IMG-20230905-WA0058.jpg
Published on

ಚನ್ನಪಟ್ಟಣ

ಜಮೀನಿಗೆ ಹೋಗಿದ್ದ ಮಹಿಳೆಯೊಬ್ಬಳು ತನ್ನ ಜಮೀನಿನಲ್ಲಿಯೇ ಶವವಾಗಿ ಪತ್ತೆಯಾಗಿರುವ ಘಟನೆ
ಚನ್ನಪಟ್ಟಣ ತಾಲೂಕಿನ ದ್ಯಾವಪಟ್ಟಣ ಗ್ರಾಮದಲ್ಲಿ ನಡೆದಿದೆ.
ಶ್ವೇತ.ಸಿ‌.ಕೆ(33) ಶವವಾಗಿ ಪತ್ತೆಯಾಗಿರುವ ಮಹಿಳೆ.
ನಿನ್ನೆ ಸಂಜೆ ಜಮೀನಿಗೆ ಹೋಗಿದ್ದ ಮಹಿಳೆ ವಾಪಸ್ಸ್ ಬಂದಿರಲಿಲ್ಲ. ರಾತ್ರಿಯಾದರೂ ಮನೆಗೆ ಬಂದಿರಲಿಲ್ಲ. ರಾತ್ರಿಯೆಲ್ಲ ಸಂಬಂಧಿಕರು ಹಾಗೂ ಗ್ರಾಮಸ್ಥರು ಈಕೆಯನ್ನು ತಡಕಾಡಿದ್ದರು. ಆದರೆ, ಮಂಗಳವಾರ ಮುಂಜಾನೆ ತನ್ನ ಜಮೀನಿನಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ.

ಕೊಲೆ ಶಂಕೆ?
ತಾಲೂಕಿನ ಚಕ್ಕೆರೆ ಗ್ರಾಮದ ಶ್ವೇತಳನ್ನು ದ್ಯಾವಪಟ್ಟಣ ಗ್ರಾಮದ ಪುರುಷೋತ್ತಮ್ ಎಂಬಾತನಿಗೆ ಮದುವೆ ಮಾಡಿಕೊಡಲಾಗಿತ್ತು. ಈ ದಂಪತಿಗೆ ಒರ್ವ ಪುತ್ರಿಯಿದ್ದು, ಮೃತಳ ಗಂಡ ಚಾಲಕನಾಗಿದ್ದು, ಬೆಂಗಳೂರಿನಲ್ಲಿ ವಾಸವಿದ್ದ. ವಾರಕೊಮ್ಮೆ ಬಂದು ಹೋಗುತ್ತಿದ್ದ ಎನ್ನಲಾಗಿದೆ. ಈಕೆಯ ಸಾವಿನ ಮೇಲೆ ಸಾಕಷ್ಟು ಅನುಮಾನಗಳು ಸೃಷ್ಠಿಯಾಗಿದ್ದು, ಈಕೆಯ ಅತ್ತೆ ಮಾವ ಪುಟ್ಟಸ್ವಾಮಿ ತಾಯಮ್ಮ, ನಾದಿನಿ ಪತಿಯಿಂದಲೇ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ.

ಮೃತಳಿಗೂ ಹಾಗೂ ಆಕೆಯ ಅತ್ತೆಮನೆಯವರಿಗೂ ಈ ಹಿಂದೆ ಜಮೀನಿನ ವಿಚಾರವಾಗಿ ಸಾಕಷ್ಟು ಗಲಾಟೆ ನಡೆದಿದ್ದು, ರಾಜಿ ಪಂಚಾಯಿತಿಗಳು ಸಹ ನಡೆದಿದ್ದವು. ರಾತ್ರಿ ೧೨ ರವರೆಗೆ ಜಮೀನಿನಲ್ಲಿ ಕಾಣದ ಮೃತದೇಹ, ಬೆಳಿಗ್ಗೆ ಪತ್ತೆಯಾಗಿರುವುದು ಸಹ ಸಾಕಷ್ಟು ಗೊಂದಲ‌ಮೂಡಿಸಿದೆ. ಸ್ಥಳಕ್ಕೆ ಅಕ್ಕೂರು ಪೊಲೀಸರ ಭೇಟಿನೀಡಿ ಪರಿಶೀಲನೆ ನಡೆಸುತ್ತಿದ್ದು,
ಸ್ಥಳಕ್ಕೆ ಎಸ್ಪಿ ಬರುವವರೆಗೂ ಮೃತದೇಹ ಹೊರ ತೆಗೆಯದಂತೆ ಶ್ವೇತ ಕುಟುಂಬಸ್ಥರು ಪಟ್ಟು ಹಿಡಿದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net