

ಚನ್ನಪಟ್ಟಣ
ರೈತರ ಬಗ್ಗೆ ಕಾಳಜಿ ಇಲ್ಲದ ಈಗಿನ ಕಾಂಗ್ರೆಸ್ ಸರ್ಕಾರ ದರಿದ್ರ ಸರ್ಕಾರ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಕಿಡಿಕಾರಿದರು.
ತಾಲೂಕಿನ ಹಾರೋಕೊಪ್ಪ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಮಹಾಘಟಬಂಧನ್ ಕಾರ್ಯಕ್ರಮ ಪ್ರಮುಖ ಅಲ್ಲ.
ಕಳೆದ ಎರಡು ತಿಂಗಳಿಂದ 42ರೈತ ಕುಟುಂಬಗಳ ಆತ್ಮಹತ್ಯೆ ಆಗಿದೆ. ಈ ಸರ್ಕಾರಕ್ಕೆ ರೈತರ ಆತ್ಮಹತ್ಯೆ ಬಗ್ಗೆ ಚಿಂತನೆ ಇಲ್ಲ.ಈ ಬಜೆಟ್ ನಲ್ಲೂ ಸಹ ಐದು ಗ್ಯಾರಂಟಿಗಳ ಹೆಸರಲ್ಲಿ ಕೃಷಿ ಇಲಾಖೆ ಸಂಪೂರ್ಣ ಕಡೆಗಣಿಸಿದ್ದಾರೆ.
ರೈತನ ಆತ್ಮಸ್ಥೈರ್ಯ ತುಂಬುವ ಕೆಲಸ ಸರ್ಕಾರ ಮಾಡಲಿಲ್ಲ. ಬಿಜೆಪಿ ಸರ್ಕಾರದ ಬಗ್ಗೆ ಆರೋಪ ಮಾಡುತ್ತಿದ್ದ ಕಾಂಗ್ರೆಸ್ ನವರಿಗೆ ಪ್ರಾರಂಭಿಕ ಹಂತದಲ್ಲೇ ಆರ್ಥಿಕ ಶಿಸ್ತು ಇಲ್ಲ. ರಾಜ್ಯದ ಜನತೆ ಮೇಲೆ ಸಾಲದ ಹೊರೆ ಹೇರುತ್ತಿದ್ದಾರೆ. ಐದು ಗ್ಯಾರಂಟಿಗಳ ಹೆಸರಿನಲ್ಲಿ ಲೂಟಿ ಕೆಲಸ ಪ್ರಾರಂಭ ಮಾಡಿದ್ದಾರೆ. ಖಜಾನೆಯ ಹಣ ದರೋಡೆ ಆಗ್ತಿದೆ ಎಂದು ದೂರಿದರು.
ಮಹಾನ್ ನಾಯಕರನ್ನ ಏರ್ಪೋರ್ಟ್ ನಿಂದ ತಾಜ್ ವೆಸ್ಟೆಂಡ್ ವರೆಗೆ ಅದ್ದೂರಿಯಾಗಿ ಸ್ವಾಗತಿಸುತ್ತಿದ್ದಾರೆ. ಆ ವಿಜೃಂಭಣೆಯನ್ನ ರೈತರ ಸಮಾದಿ ಮೇಲೆ ಮಾಡ್ತಿದ್ದಾರೆ. ರೈತರ ಸಮಾದಿ ಮೇಲೆ ಮಹಾ ಘಟಬಂಧನ್ ವಿಜೃಂಭಣೆ ನಡೆಯುತ್ತಿದೆ. ಇವರಿಗೆ ನಾಚಿಕೆ ಆಗಬೇಕು. ರೈತ ಕುಟುಂಬಗಳಿಗೆ ಸಾಂತ್ವಾನ ಹೇಳುವ ಕೆಲಸ ಆಗಿಲ್ಲ. ಇವರ ಒಂದುವರೆ ತಿಂಗಳ ಸಾಧನೆ ಕೇವಲ ವರ್ಗಾವಣೆ ದಂಧೆ. ದೇಶದ ಇತಿಹಾಸದಲ್ಲೇ ವರ್ಗಾವಣೆ ದಂಧೆಯಲ್ಲಿ ಹೆಚ್ಚು ಲೂಟಿ ಮಾಡಿದ್ದಾರೆ. ಕೋಟ್ಯಾಂತರ ರೂ ಲೂಟಿ ಮಾಡಲಾಗ್ತಿದೆ. ಆ ಅಧಿಕಾರಿಗಳು ಲಂಚ ಕೊಟ್ಟು ಬಂದು ಜನರತ್ರ ಲೂಟಿ ಮಾಡ್ತಾರೆ ಎಂದು ಸರ್ಕಾರದ ವಿರುದ್ಧ ಆಕ್ರೋಶವ್ಯಕ್ತಪಡಿಸಿದರು.
ಮುಂಗಾರು ಕೊರತೆ, ತಮಿಳುನಾಡಿನಿಂದ ನೀರಿನ ಖ್ಯಾತೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಟ್ರಿಬುನಲ್ ಕೋರ್ಟ್ ನಲ್ಲಿ ನೀರು ಹಂಚಿಕೆ ಬಗ್ಗೆ ತೀರ್ಪು ಕೊಟ್ಟಿದ್ದಾರೆ. ಅದರ ಆಧಾರದ ಮೇಲೆ ಅವರು ನೀರು ಕೇಳ್ತಾರೆ. ಈಗ ಸರ್ಕಾರ ಈ ಬಗ್ಗೆ ತೀರ್ಮಾನ ಮಾಡ್ಬೇಕು. ಕಾಂಗ್ರೆಸ್ ಸರ್ಕಾರ ಬಂದ್ರೆ ನಾಡಿಗೆ ದರಿದ್ರ, ಬರ ಬರುತ್ತೆ ಅಂತ ಪ್ರತೀತಿ ಇದೆ. ಯಾಕೂ ಈಗಲೂ ಅದೇ ವಾತಾವರಣ ಇದೆ ನೋಡೊಣ ಎಂದು ಲೇವಡಿ ಮಾಡಿದರು.
ಇನ್ನು ಬಿಜೆಪಿ ಪಕ್ಷದ ಬಗ್ಗೆ ಕುಮಾರಸ್ವಾಮಿ ಸಾಫ್ಟ್ ಕಾರ್ನ್ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ನನಗೆ ಯಾರ ಬಗ್ಗೆಯೂ ಸಾಫ್ಟ್ ಕಾರ್ನ್ ಇಲ್ಲ.
ನಾಡಿನ ಜನತೆ ಕಷ್ಟದ ಬಗ್ಗೆ ಸಾಫ್ಟ್ ಕಾರ್ನ್ ಇದೆ. ಪಕ್ಷಗಳ ಬಗ್ಗೆ ಸಾಫ್ಟ್ ಕಾರ್ನ್ ಇಟ್ಕೊಂಡು ಏನು ಮಾಡಲಿ ಎಂದರು.
ಜೆಡಿಎಸ್ ಅವಕಾಶವಾದಿ ರಾಜಕಾರಣ ಎಂಬ ದಿನೇಶ್ ಗುಂಡೂರಾವ್ ಹೇಳಿಕೆಗೆ ಕಿಡಿಕಾರಿದ ಕುಮಾರಸ್ವಾಮಿ, ಅವರೆಲ್ಲ ಯಾವ ರಾಜಕಾರಣ ಮಾಡ್ತಿದ್ದಾರಂತೆ. ಡಿಎಂಕೆ ಜೊತೆ ಸೇರಿ 10ವರ್ಷ ಸರ್ಕಾರ ಮಾಡಿದ್ರಲ್ಲ, ಅದು ಯಾವ ರಾಜಕಾರಣ? ಯಾವ ತರ ರಾಜಕೀಯ ಮಾಡಬೇಕು ಅಂತ ದಿನೇಶ್ ಗುಂಡೂರಾವ್ ಹತ್ರಾ ಕಲಿಬೇಕಾ? ಅಂತಹ ದರ್ದು ನನಗೆ ಬಂದಿಲ್ಲ ಎಂದು ಗುಟುರು ಹಾಕಿದರು.