

ಎಲೆಕೇರಿಯ ಗೆಂಡೆಮಡು ಸರ್ಕಾರಿ ಶಾಲೆ ದುಸ್ಥಿತಿ ಸಮಸ್ಯೆ ಬಗೆಹರಿಸಬೇಕಾದವರಿಂದ ಜಾಣಕುರುಡು ಪ್ರದರ್ಶನ
ಚನ್ನಪಟ್ಟಣ
ಶಾಲೆಯ ಬದಿಯಲ್ಲೆ ಕಲುಷಿತ ನೀರು, ಚರಂಡಿ ನೀರಿನಲ್ಲೆ ನಡೆದು ಶಾಲೆಗೆ ತೆರಳಬೇಕಾದ ಅನಿವಾರ್ಯತೆ, ಇದರ ಮಧ್ಯೆ ಸೊಳ್ಳೆ ಹಾಗೂ ಕ್ರಿಮಿಕೀಟಗಳ ಕಾಟ... ಕಲುಷಿತ ನೀರಿನ ಮಧ್ಯೆಯೇ ಆಟ, ಪಾಠ, ಊಟ. ಇದು ನಗರದ ಎಲೆಕೇರಿಯ ಗೆಂಡೆಮಡು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ದುಸ್ಥಿತಿ.
ಪ್ರಸುತ್ತ ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುವವರೇ ಹೆಚ್ಚು. ಅದಕ್ಕೆ ಕಾರಣ, ಉತ್ತಮ ಶಿಣ ದೊರಕುವುದಿಲ್ಲ ಎಂಬುದಲ್ಲ. ಬದಲಾಗಿ, ಸರ್ಕಾರಿ ಶಾಲೆಗಳ ನಿರ್ವಹಣೆಯಲ್ಲಿ ರ್ನಿಲಕ್ಷ$್ಯ ಎನ್ನುವುದು. ಇದಕ್ಕೆ ಈ ಶಾಲೆ ಉತ್ತಮ ಉದಾಹರಣೆ ಎಂದರೆ ತಪ್ಪಾಗಲಾರದು.
ನಗರದ ಎಲೆಕೇರಿಯ (ಗೆಂಡೆಮಡು) 15ನೇ ವಾರ್ಡ್ಗೆ ಸೇರುವ ಈ ಶಾಲೆಯಲ್ಲಿ 1ರಿಂದ 5ನೇ ತರಗತಿವರೆಗೆ 35 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಉತ್ತಮ ಶಾಲಾ ಕಟ್ಟಡ ಹಾಗೂ ನುರಿತ ಶಿಕರನ್ನು ಹೊಂದಿದ್ದರೂ, ಶಾಲೆಗೆ ಹಲವು ವರ್ಷಗಳಿಂದ ಕಾಡುತ್ತಿರುವ ಜಲಕಂಟಕ ನಿವಾರಣೆಯಾಗಿಲ್ಲ. ಶಾಲೆ ಎದುರು ನಿಲ್ಲುತ್ತಿರುವ ಚರಂಡಿ ನೀರಿನಿಂದ ಶಿಕರು ಮತ್ತು ವಿದ್ಯಾರ್ಥಿಗಳು ಕಸಿವಿಸಿ ಅನುಭವಿಸುತ್ತಿದ್ದಾರೆ. ಹಲವಾರು ವರ್ಷಗಳಿಂದ ಈ ಸಮಸ್ಯೆ ಕಾಡುತ್ತಿದ್ದರೂ ಬಗೆಹರಿಸಬೇಕಾದವರು ಜಾಣಕುರುಡು ಪ್ರದರ್ಶನ ಮಾಡುತ್ತಿದ್ದಾರೆ.
ಜಲಕಂಟಕದಿಂದ ಹೈರಾಣ!
ಶಾಲೆಗೆ ತೆರಳಲು ಉತ್ತಮವಾದ ರಸ್ತೆಯೂ ಇಲ್ಲ. ಶಾಲೆ ತಗ್ಗು ಪ್ರದೇಶದಲ್ಲಿರುವ ಕಾರಣ ಈ ಭಾಗದ ಬಹುತೇಕ ಚರಂಡಿ ನೀರು ಶಾಲೆಯ ಎದುರು, ಕಾಂಪೌಂಡ್ ಪಕ್ಕ ಸಂಗ್ರಹವಾಗುತ್ತಿದೆ. ಇನ್ನು ನೀರು ಹರಿದುಹೋಗಲು ಚರಂಡಿ ವ್ಯವಸ್ಥೆ ಇಲ್ಲದಿರುವುದು ಸಮಸ್ಯೆಗೆ ಕಾರಣವಾಗಿದೆ. ಇದರಿಂದಾಗಿ ಸೊಳ್ಳೆ ಹಾಗೂ ಕ್ರಿಮಿಕೀಟಗಳ ಕಾಟ ಹೆಚ್ಚಾಗಿದೆ. ಪ್ರತಿದಿನ ಮಕ್ಕಳು ಕಲುಷಿತ ನೀರನ್ನು ತುಳಿದುಕೊಂಡೇ ಶಾಲೆಗೆ ತೆರಳಬೇಕಾಗಿದೆ. ಮಳೆ ಬಂದರಂತೂ ಪರಿಸ್ಥಿತಿ ದೇವರಿಗೇ ಪ್ರೀತಿ ಎನ್ನಬಹುದಾಗಿದೆ. ಕಲುಷಿತ ನೀರು ಹಾಗೂ ದುರ್ನಾತದ ಮಧ್ಯೆಯೇ ಈ ಶಾಲೆಯ ಮಕ್ಕಳ ಆಟ, ಪಾಠ, ಊಟ ಎಲ್ಲವೂ ನಡೆಯುತ್ತಿದೆ.
ದಾಖಲೆಗಳು ನೀರುಪಾಲು
ಕಳೆದ ವರ್ಷ ಅತಿಹೆಚ್ಚು ಮಳೆ ಸುರಿದ ಸಮಯದಲ್ಲಿ ಶಾಲೆ ಮುಳುಗಡೆಯಾಗಿ ದಾಖಲೆಗಳು ಹಾಗೂ ಅರದಾಸೋಹದ ಸಾಮಗ್ರಿಗಳು ನೀರು ಪಾಲಾಗಿದ್ದವು. ಮಳೆಬಂದರೆ ಸಮಸ್ಯೆ ಇಮ್ಮಡಿಯಾಗುತ್ತಿದೆ. ಈ ಸಂಬಂಧ ಶಿಕರು, ಪಾಲಕರು, ಎಸ್ಡಿಎಂಸಿ ಸದಸ್ಯರು ನಗರಸಭೆ ಹಾಗೂ ಶಿಣ ಇಲಾಖೆಗೆ ದೂರು ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ನಗರಸಭೆ ಹಾಗೂ ಶಿಣ ಇಲಾಖೆ ರ್ನಿಲಕ್ಷ್ಯಕ್ಕೆ ಪಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಾಲೆ ಮುಂಭಾಗ ಚರಂಡಿ ನೀರು ನಿಲ್ಲುತ್ತಿರುವುದು ಸಮಸ್ಯೆಯಲ್ಲ. ಮಳೆಬಂದಾಗ ಶಾಲಾ ಆವರಣಕ್ಕೆ ಚರಂಡಿ ನೀರು ತುಂಬುತ್ತಿದೆ. ಮಕ್ಕಳು ಗಲೀಜು ನೀರನ್ನು ತುಳಿದುಕೊಂಡೇ ಓಡಾಡಬೇಕಿದೆ. ಈ ಬಗ್ಗೆ ನಗರಸಭೆ ಹಾಗೂ ಶಿಣ ಇಲಾಖೆಗೆ ಮನವಿ ಸಲ್ಲಿಸಿದರೂ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿಲ್ಲ. ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಿಸಿಕೊಡಬೇಕು.
ರಾಮಮೂರ್ತಿ, ಎಸ್ಡಿಎಂಸಿ ಅಧ್ಯಕ್ಷ
ಶಾಲೆಯ ಸಮಸ್ಯೆಯ ಬಗ್ಗೆ ಅರಿವಿದೆ. ಶಾಲೆಯ ಮುಂಭಾಗ ಚರಂಡಿ ವ್ಯವಸ್ಥೆ ಇಲ್ಲದಿರುವುದು ಸಮಸ್ಯೆಗೆ ಕಾರಣವಾಗಿದೆ. ಸದ್ಯಕ್ಕೆ ತಾತ್ಕಾಲಿಕ ಪರಿಹಾರ ರೂಪಿಸಲು ಅಧಿಕಾರಿಗಳಿಗೆ ತಿಳಿಸಿದ್ದೇನೆ. ಸ್ಥಳ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇನೆ. ಶಾಶ್ವತ ಪರಿಹಾರಕ್ಕಾಗಿ ನಗರಸಭೆ ಅಧಿಕಾರಿಗಳ ಜತೆಗೂ ಮಾತನಾಡುತ್ತೇನೆ.
ಮರೀಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ, ಚನ್ನಪಟ್ಟಣ