

ಚನ್ನಪಟ್ಟಣ:
ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ವಿಚಾರದ ಬೆನ್ನಲ್ಲೇ ಸಂಸದ ಡಿ.ಕೆ.ಸುರೇಶ್ , ಬಿಜೆಪಿ ನಾಯಕ ಸಿ.ಪಿ.ಯೋಗೇಶ್ವರ್ ವಿರುದ್ಧ ಏಕ ವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.
ಮಾಕಳಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಡಿ.ಕೆ.ಸುರೇಶ್,
ವೈಯಕ್ತಿಕ ಲಾಭಕ್ಕೆ ಮೆಡಿಕಲ್ ಕಾಲೇಜು ಸ್ಥಳಾಂತರ ಮಾಡಿಕೊಳ್ಳುತ್ತಿದ್ದಾರೆ ಎಂಬ ಯೋಗೇಶ್ವರ್ ಆರೋಪಕ್ಕೆ ಸಂಸದ ಡಿ.ಕೆ.ಸುರೇಶ್, ಯೋಗೇಶ್ವರ್ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದರು.
ಅವನಿಗೆ ಮಾಡುವುದಕ್ಕೆ ಬೇರೆ ಏನೂ ಕೆಲಸ ಇಲ್ಲ.., ಅದಕ್ಕೆ ಹೀಗೆ ಮಾತನಾಡುತ್ತಿದ್ದಾನೆ. ಅವನು ಬಿಡದಿಯಲ್ಲಿ ರಿಯಲ್ ಎಸ್ಟೇಟ್ ಹೆಸರಲ್ಲಿ ಜನರಿಗೆ ಟೋಪಿ ಹಾಕಿದ್ದಾನೆ. ಮೆಗಾ ಸಿಟಿ ಮಾಡುತ್ತೇನೆ ಅಂಥ ಜನಕ್ಕೆ ಟೋಪಿಹಾಕಿದ್ದಾನೆ. ಅದನ್ನ ಮರೆತು ಹೋಗಿದ್ದಾನಾ ಕೇಳಿ? ರಿಯಲ್ ಎಸ್ಟೇಟ್ ದಂಧೆ ಮಾಡಬೇಕಾದ ಅನಿವಾರ್ಯ ನಮಗಿಲ್ಲ.
ಮೆಡಿಕಲ್ ಕಾಲೇಜು ಕನಕಪುರದಲ್ಲೂ ಆಗುತ್ತೆ, ರಾಮನಗರದಲ್ಲೂ ಆಗುತ್ತೆ. ಇವರೆಲ್ಲ ಕೆಲಸ ಇಲ್ಲ ಅಂಥ ಬಂದು ಹೀಗೆ ಗೊಂದಲ ಮಾಡುತ್ತಿದ್ದಾರೆ. ನಮ್ಮ ಜನ
ಇಬ್ಬರನ್ನೂ ಉಗಿದು ಆಚೆ ಇಟ್ಟಿದ್ದಾರೆ ಎಂದು ಯೋಗೇಶ್ವರ್ ಹಾಗೂ ಪರೋಕ್ಷವಾಗಿ ಮಾಗಡಿ ಶಾಸಕ ಎ.ಮಂಜುನಾಥ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ಹಿಂದೆ ಯಡಿಯೂರಪ್ಪ ಅವರನ್ನ ಇವನು ಬ್ಲಾಕ್ ಮೇಲೆ ಮಾಡಿದ್ದ. ಅದ್ಯಾವುದೋ ಸಿಡಿ ಇಟ್ಟುಕೊಂಡು ಸರ್ಕಾರ ಕಿತ್ತಿದ್ದಾಯಿತು. ಈಗ ಕಾಂಗ್ರೆಸ್ ಸರ್ಕಾರ ತೆಗೆತೀನಿ ಅಂತ ಹೇಳುತ್ತಿದ್ದಾನೆ. ಬರೀ ಸರ್ಕಾರ ಬೀಳಿಸೋ ಕೆಲಸ ಮಾತ್ರಾನ ಈತ ಮಾಡೋದು? ಇವನು ಜನರಿಗೋಸ್ಕರ ಏನು ಮಾಡಿದ್ದಾನೆ. ಯೋಗೇಶ್ವರ್ ನಾಲಗೆ ಬಿಗಿ ಹಿಡಿದುಕೊಳ್ಳಲಿ ಎಂದು ಎಚ್ಚರಿಸಿದರು.
ಈ ಹಿಂದೆ ಸಿಡಿ ಇಟ್ಟುಕೊಂಡು ಎಲ್ಲಾ ಮಠಗಳಿಗೂ ಓಡಾಡುತ್ತಿದ್ದಾನೆ ಅಂಥ ಮಾಧ್ಯಮಗಳಲ್ಲಿ ಬಂದಿತ್ತು.
ಯಡಿಯೂರಪ್ಪ ಸರ್ಕಾರದಲ್ಲಿ ಸಿಡಿ ಇದೆ ಅಂತ ಒಡಾಡುತ್ತಿದ್ದ. ಸಮ್ಮಿಶ್ರ ಸರ್ಕಾರ ಹೋಗಲು ಕಾರಣ ಯಾರು.? ಸರ್ಕಾರ ತೆಗೆದೆ ಅಂಥ, ಬಾಂಬೆ ಬಾಯ್ಸ್ ಸೃಷ್ಟಿ ಮಾಡ್ದೆ ಅಂಥ ಅವನೇ ಹೇಳಿಕೊಂಡಿದ್ದಾನೆ.
ನನಗೆ ಮಂತ್ರಿ ಸ್ಥಾನ ಕೊಟ್ಟಿಲ್ಲ ಅಂತ ಹೇಳ್ಕೊಂಡಿದ್ದವರು ಯಾರು? ಮೊದಲು ಅವನ ಹಿನ್ನಲೆ ಬಗ್ಗೆ ಚರ್ಚೆ ಮಾಡಿಕೊಳ್ಳಲಿ.ವಿರೋಧ ಪಕ್ಷದ ಸಲಹೆಗಳನ್ನ ಸಕಾರಾತ್ಮಕವಾಗಿ ಸ್ವೀಕಾರ ಮಾಡುತ್ತೇವೆ. ಆದರೆ, ಬಾಯಿಗೆ ಬಂದಹಾಗೆ ಮಾತನಾಡಿದರೆ ನಾವು ಕೇಳಲ್ಲ ಎಂದು ಯೋಗೇಶ್ವರ್ ಗೆ ವಾರ್ನಿಂಗ್ ನೀಡಿದರು.