

ಚನ್ನಪಟ್ಟಣ
ಕಾಮಕ್ಕೆ ಕಣ್ಣಿಲ್ಲ ಎಂಬ ಮಾತಿದೆ. ಈ ಹಿಂದಿನಿಂದಲೂ ನಡೆದಿರುವ ಅತ್ಯಾಚಾರ ಸೇರಿದಂತೆ ಹಲವಾರು ಘಟನೆಗಳು ಇದಕ್ಕೆ ಸಾಕ್ಷಿಯಾಗಿವೆ. ಆದರೆ, ಅತ್ಯಾಚಾರ ಎನ್ನುವುದು ಕೇವಲ ಹೆಣ್ಣಿನ ಮೇಲಷ್ಟೇ ನಡೆಯುತ್ತಿದ್ದ ಕಾಲವಿತ್ತು. ಆದರೆ, ಪ್ರಸುತ್ತ ಕಾಮಾಂಧರು ಪ್ರಾಣಿಗಳನ್ನೂ ಬಿಡುತ್ತಿಲ್ಲ.
ಮೂಕ ಪ್ರಾಣಿಗಳ ಮೇಲೆ ಅತ್ಯಾಚಾರ ಮಾಡಿದ ಘಟನೆಗಳಲ್ಲಿ ಮನುಷ್ಯನ ವಿಕೃತ ಮನಸ್ಥಿತಿ ಸ್ಪಷ್ಟವಾಗಿ ಕಾಣಬಹುದು. ಈಗ ಇಂಥದ್ದೇ ಘಟನೆಯೊಂದು ಬೊಂಬೆನಗರಿ ಚನ್ನಪಟ್ಟಣದಲ್ಲಿ ನಡೆದಿದೆ.
ನಗರದ ಇಂದಿರಾ ಕಾಟೇಜ್ ನಿವಾಸಿ ರೂಹಿದ್ ಅಹಮದ್ ಮೇಕೆಯೊಂದರ ಮೇಲೆ ಅತ್ಯಾಚಾರ ನಡೆಸಿದ್ದು, ಈ ಸಂಬಂಧ ಆತನ ಮೇಲೆ ಪುರಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ದೂರಿನಲ್ಲಿ ಏನಿದೆ?
ಈ ವಿಚಾರಕ್ಕೆ ಸಂಬಂಧಿಸಿದಂತೆ ಇಂದಿರಾ ಕಾಟೇಜ್ ನಿವಾಸಿ ಜಮೀರ್ ಖಾನ್ ಎಂಬುವವರು ಪೊಲೀಸರಿಗೆ ದೂರು ನೀಡಿದ್ದು, ಆಟೋ ಚಾಲಕನಾಗಿರುವ ಆರೋಪಿ ರೂಹಿದ್ ಅಹಮದ್ ಶುಕ್ರವಾರ ಬಡಾವಣೆಯಲ್ಲಿನ ನಿರ್ಮಾಣ ಹಂತದ ಮನೆಯ ಮರೆಗೆ ಮೇಕೆಯೊಂದನ್ನು ಹಿಡಿದುಕೊಂಡು ಹೋಗುತ್ತಿದ್ದು, ಅನುಮಾನ ಬಂದು ಹಿಂಬಾಲಿಸಿದ್ದಾಗ ಆತ, ಮೇಕೆಯೊಂದಿಗೆ ಪ್ರಕೃತಿಗೆ ವಿರುದ್ಧವಾಗಿ ಸಂಭೋಗ ನಡೆಸುವ ಮೂಲಕ ಮೇಕೆಗೆ ಹಿಂಸೆ ನೀಡುತ್ತಿದ್ದ. ಆತನ ಕೃತ್ಯವನ್ನು ತನ್ನ ಮೊಬೈಲ್ ನಲ್ಲಿ ಸೆರೆಹಿಡಿದಿದ್ದು, ಆತನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ದೂರು ನೀಡಿದ್ದರು. ದೂರಿನ ಮೇರೆಗೆ ಶನಿವಾರ ಆರೋಪಿ ವಿರುದ್ಧ ಪುರಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.