

ಯಂತ್ರ ಜೋಡಣೆ ಬಾಕಿ ಪಿಎಂಎಫ್ಎಂಇ ಯೋಜನೆಯಡಿ ಕೆವಿಕೆಯಲ್ಲಿ ಸ್ಥಾಪನೆ
ಗಂಗಾಧರ್ ಬೈರಾಪಟ್ಟಣ ರಾಮನಗರ
ಪ್ರಧಾನಮಂತ್ರಿ ಕಿರು ಆಹಾರ ಸಂಸ್ಕರಣ ಉದ್ಯಮ (ಪಿಎಂಎಫ್ಎಂಇ) ಯೋಜನೆಯಡಿ ಕೃಷಿ ವಿಶ್ವವಿದ್ಯಾಲಯದ ಮೂಲಕ ಸಾಮಾನ್ಯ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸುತ್ತಿದ್ದು, ಮಾಗಡಿ ಕೃಷಿ ವಿಜ್ಞಾನ ಕೇಂದ್ರ (ಕೆವಿಕೆ)ದಲ್ಲಿ ತೆಂಗು ಆಧಾರಿತ ಸಂಸ್ಕರಣಾ ಟಕ ನಿರ್ಮಾಣ ಬಹುತೇಕ ಪೂರ್ಣಗೊಂಡಿದೆ.
ಮಾಗಡಿ ತಾಲೂಕಿನ ಚಂದೂರಾಯರಹಳ್ಳಿ ಬಳಿ ಇರುವ ಕೃಷಿ ವಿಜ್ಞಾನ ಕೇಂದ್ರದಲ್ಲಿ ಸುಮಾರು 3 ಕೋಟಿ ರೂ. ವೆಚ್ಚದಲ್ಲಿ ಘಟಕ ನಿರ್ಮಾಣಕ್ಕೆ ಈ ಹಿಂದೆಯೇ ಅನುಮತಿ ನೀಡಿ, ಇದರ ನಿರ್ವಹಣೆ ಜವಾಬ್ದಾರಿಯನ್ನು ಜಿಲ್ಲಾ ಮಾವು ಮತ್ತು ತೆಂಗು ಬೆಳೆಗಾರರ ಸಹಕಾರ ಸಂಕ್ಕೆ (ಎಫ್ಪಿಒ) ನೀಡಲಾಗಿದೆ.
ಏನಿದು ಯೋಜನೆ?
"ಒಂದು ಜಿಲ್ಲೆ ಒಂದು ಉತ್ಪನ್ನ' ಯೋಜನೆಯಡಿ ಆಯಾ ಜಿಲ್ಲೆಯಲ್ಲಿ ಅತಿ ಹೆಚ್ಚು ಬೆಳೆಯುವ ಬೆಳೆಗಳ ಆಧಾರದ ಮೇಲೆ ಸರ್ಕಾರ ಯೋಜನೆ ರೂಪಿಸಿದೆ. ಇದರ ಭಾಗವಾಗಿ ರೈತರು ಇಲ್ಲವೇ ಸಹಕಾರ ಸಂಗಳ ಮೂಲಕ ಸಂಸ್ಕರಣಾ ಟಕ ಸ್ಥಾಪನೆಗೆ ನೆರವು ನೀಡಲು ಮುಂದಾಗಿತ್ತು. ಆದರೆ ಸಾಲಸೌಲಭ್ಯದ ಕೊರತೆ ಹಾಗೂ ರೈತರೇ ನೇರವಾಗಿ ಬಂದು ಉತ್ಸಾಹ ತೋರದ ಕಾರಣ ಈ ಯೋಜನೆ ನನೆಗುದಿಗೆ ಬಿದ್ದಿತ್ತು. ಇದೀಗ ಕೇಂದ್ರ ಸರ್ಕಾರವೇ ಯೋಜನೆಯಡಿ ತೆಂಗು ಸಂಸ್ಕರಣಾ ಘಟಕಕ್ಕೆ ಅವಕಾಶ ನೀಡಿದೆ. ಈಗಾಗಲೇ ಕಟ್ಟಡ ನಿರ್ಮಾಣ ಪೂರ್ಣಗೊಂಡಿದ್ದು, ಯಂತ್ರಗಳು ರವಾನೆಯಾಗಿವೆ. ಇವುಗಳ ಜೋಡಣೆ ಕಾರ್ಯವಷ್ಟೇ ಬಾಕಿ ಇದೆ. ಶ್ರೀಘ್ರವೇ ಘಟಕ ಕಾರ್ಯಾರಂಭ ಮಾಡಲಿದೆ.
ರಾಜ್ಯದಲ್ಲಿ 14ನೇ ಘಟಕ
ದೇಶದಲ್ಲಿ ಒಟ್ಟು ವಿವಿಧ 28 ಉತ್ಪನ್ನಗಳ ಟಕಗಳನ್ನು ಸ್ಥಾಪನೆ ಮಾಡಲು ಅನುಮೋದನೆ ನೀಡಿರುವ ಜತೆಗೆ ಅನುದಾನವನ್ನು ಕೇಂದ್ರ ಸರ್ಕಾರ ನೀಡಿದೆ. ಇದರಲ್ಲಿ ರಾಜ್ಯದಲ್ಲಿಯೇ 14 ಟಕಗಳು ತಲೆ ಎತ್ತಲಿದ್ದು, ರಾಮನಗರ ಜಿಲ್ಲೆಗೆ ತೆಂಗು ಬೆಳೆ ನಿಗದಿಪಡಿಸಲಾಗಿದೆ. ಪ್ರತಿ ಟಕದ ವೆಚ್ಚ 3 ಕೋಟಿ ರೂ.ಗಳಾಗಿದ್ದು, ಇದರ ನಿರ್ವಹಣೆಗಾಗಿ ಟೆಂಡರ್ ಕರೆದು ಅದರಲ್ಲಿ ಸರ್ಕಾರದ ಮಾನದಂಡ ಅನುಸರಿಸಿ ಯಶಸ್ವಿ ಆದ ಸಂಸ್ಥೆಗೆ ನಿರ್ವಹಣೆ ಹೊಣೆ ನೀಡಲಾಗುತ್ತಿದೆ. ಇದರ ಸಂಪೂರ್ಣ ನಿರ್ಮಾಣ ಮೇಲುಸ್ತುವಾರಿಯನ್ನು ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯ ಮಾಡಲಿದ್ದು, ಕಾರ್ಯಾಚರಣೆ ಜವಾಬ್ದಾರಿ ಎಫ್ಪಿಒ ಮೇಲಿದೆ.
ಏನೆಲ್ಲಾ ಲಾಭ?
ತುಮಕೂರು ಜಿಲ್ಲೆ ನಂತರ ಅತಿ ಹೆಚ್ಚು ತೆಂಗು ಬೆಳೆಯುವ ಪ್ರದೇಶ ರಾಮನಗರ. ಜಿಲ್ಲೆಯ ಸುಮಾರು 30 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆಯಾಗುತ್ತಿದ್ದು, ಪ್ರತಿವರ್ಷ ಸುಮಾರು 12 ಲಕ್ಷ ಟನ್ ಉತ್ಪಾದನೆ ಆಗುತ್ತದೆ. ಇದರಲ್ಲಿ ಅತಿ ಹೆಚ್ಚಿನ ಪಾಲು ಮಧ್ಯವರ್ತಿಗಳ ಮೂಲಕವೇ ಮಾರುಕಟ್ಟೆ ಪ್ರವೇಶ ಪಡೆದರೆ ಮತ್ತಷ್ಟು ಭಾಗವನ್ನು ರೈತರೇ ಮಾರುಕಟ್ಟೆಗೆ ತಂದರೂ ಹೆಚ್ಚಿನ ಲಾಭ ಗಳಿಸಲು ಸಾಧ್ಯವಾಗುತ್ತಿಲ್ಲ. ಇದೀಗ ತೆಂಗು ಆಧಾರಿತ ಸಂಸ್ಕರಣಾ ಟಕ ಸ್ಥಾಪನೆಯಿಂದಾಗಿ ನೇರವಾಗಿಯೇ ರೈತರು ತಾವು ಬೆಳೆದ ತೆಂಗಿಗೆ ಮೌಲವರ್ಧನೆ ಮಾಡುವ ಅವಕಾಶ ಇದೆ.
ಇದರಲ್ಲಿ ಪ್ರಮುಖ ವರ್ಜಿನ್ ತೆಂಗಿನ ಎಣ್ಣೆ, ಒಣಗಿಸಿದ ತೆಂಗಿನ ಪುಡಿ ಹಾಗೂ ತೆಂಗಿನ ಹಾಲಿನ ಪುಡಿಯನ್ನು ಇಂತಿಷ್ಟು ಮೊತ್ತ ಎಂದು ಪಾವತಿಸಿ ತಯಾರಿಸಬಹುದಾಗಿದೆ. ಇಲ್ಲವೇ ಎಫ್ಪಿಒ ಮೂಲಕವಾದರೂ ತೆಂಗಿಗೆ ಉತ್ತಮ ಬೆಲೆ ಪಡೆಯಬಹುದು. ಇಷ್ಟೇ ಅಲ್ಲದೆ, ತೆಂಗಿನ ಚಿಪ್ಪು, ನಾರಿನಿಂದ ಉಪ ಉತ್ಪನ್ನಗಳನ್ನು ತಯಾರಿಸಲೂ ಅವಕಾಶವಿದೆ. ಒಟ್ಟಾರೆ ಜಿಲ್ಲೆಯ ತೆಂಗು ಬೆಳೆಗಾರರಿಗೆ ಶಕ್ತಿ ತುಂಬುವ ಪ್ರಯತ್ನ ಮೊದಲ ಯಶಸ್ಸು ಸಾಧಿಸಿದೆ.
ತೆಂಗು ಬೆಳೆಗಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪಿಎಂಎಫ್ಎಂಇ ಯೋಜನೆಯಡಿ ತೆಂಗು ಆಧಾರಿತ ಸಂಸ್ಕರಣಾ ಟಕ ನಿರ್ಮಾಣ ಪೂರ್ಣಗೊಂಡಿದ್ದು, ಯಂತ್ರಗಳನ್ನು ಜೋಡಿಸಿದರೆ ಟಕ ಕಾರ್ಯಾರಂಭ ಮಾಡಲಿದೆ. ಇದರಿಂದ ಜಿಲ್ಲೆಯ ತೆಂಗು ಬೆಳೆಗಾರರು ಬೆಳೆಗಳಿಗೆ ಮೌಲ್ಯವರ್ಧನೆ ಮಾಡಿಕೊಳ್ಳುವ ಹಾಗೂ ಹೆಚ್ಚಿನ ಲಾಭ ಗಳಿಸಲು ಅವಕಾಶವಾಗಲಿದೆ.
ಸಿ.ಪುಟ್ಟಸ್ವಾಮಿ, ನಿರ್ದೇಶಕರು, ರಾಮನಗರ ಜಿಲ್ಲಾ ಮಾವು ಮತ್ತು ತೆಂಗು ಬೆಳೆಗಾರರ ಸಹಕಾರ ಸಂ
ತೆಂಗು ಸಂಸ್ಕರಣಾ ಟಕದ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಯಂತ್ರಗಳ ಜೋಡಣೆಯಷ್ಟೇ ಬಾಕಿ ಇದೆ. ಇದು ಅತಿ ಶ್ರೀದಲ್ಲಿಯೇ ಆಗಲಿದ್ದು, ನಂತರ ಟಕದ ಕೆಲಸ ಆರಂಭವಾಗಲಿದೆ.
ಡಾ.ಲತಾ ಕುಲಕರ್ಣಿ, ಕೆವಿಕೆ ಮುಖ್ಯಸ್ಥರು