ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಕಳವು

Bike
Published on
 ಚನ್ನಪಟ್ಟಣ:
ಮನೆಯ ಮುಂದೆ ನಿಲ್ಲಿಸಿದ್ದ ಎರಡು ಬೈಕ್‌ಗಳನ್ನು ಕಳವು ಮಾಡಿರುವ ಘಟನೆ ನಗರದ ಸಿ.ಕೆ.ರಸ್ತೆಯಲ್ಲಿ ಭಾನುವಾರ ನಡೆದಿದೆ.

ಇಲ್ಲಿನ ನಿವಾಸಿ ತಾಹೀರ್ ಖಾನ್ ಎಂಬುವವರ ಮನೆಯ ಮುಂದೆ ನಿಲ್ಲಿಸಿದ್ದ ಹೊಂಡಾ ಶೈನ್ ದ್ವಿಚಕ್ರ ವಾಹನ ಹಾಗೂ ಬಜಾಜ್ ಪ್ಲಾಟೀನಾ ಬೈಕ್‌ಗಳನ್ನು ಕಳುವು ಮಾಡಲಾಗಿದೆ.

ತಾಹೀರ್ ಖಾನ್ ಮನೆಯಲ್ಲಿ ಮಗಳ ನಿಶ್ಚಿತಾರ್ಥ ಕಾರ್ಯಕ್ರಮವಿದ್ದು, ನಿಶ್ಚಿತಾರ್ಥಕ್ಕೆ ಸಾಕಷ್ಟು ಆಗಮಿಸಿದ್ದರು. ನಿಶ್ಚಿತಾರ್ಥ ಮುಗಿದ ರಾತ್ರಿ ಮಳೆ ಬಂದಿದು, ನಿಶ್ಚಿತಾರ್ಥಕ್ಕೆ ಬಂದಿದ್ದ ಅವರ ಸ್ನೇಹಿತ ಅನ್ವರ್ ಖಾನ್, ತಾಹೀರ್ ಖಾನ್ ಅವರ ಹೊಂಡಾ ಶೈನ್ ಬೈಕ್ ಪಕ್ಕ ತಮ್ಮ ಬಜಾಜ್ ಪ್ಲಾಟೀನಾ ಬೈಕ್ ಅನ್ನು ನಿಲ್ಲಿಸಿ ಮನೆಗೆ ತೆರಳಿದ್ದರು. ಬೆಳಗ್ಗೆ ಎದ್ದು ನೋಡಿದಾಗ ಎರಡು ಬೈಕ್ ಕಳುವಾಗಿರುವುದು ಪತ್ತೆಯಾಗಿದೆ.

ಈ ಸಂಬಂಧ ಚನ್ನಪಟ್ಟಣದ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net