ಛಲವಾದಿ ಕ್ಷೇಮಾಭಿವೃದ್ಧಿ ಸಂಘಕ್ಕೆ ಚಲುವರಾಜು ರಾಮನಗರ ಜಿಲ್ಲಾಧ್ಯಕ್ಷ

Rmg Chalavadi
Published on

ರಾಮನಗರ: ಕರ್ನಾಟಕ ರಾಜ್ಯ ಛಲವಾದಿ ಕ್ಷೇಮಾಭಿವೃದ್ದಿ ಸಂಘದ ರಾಮನಗರ ಜಿಲ್ಲಾ ಘಟಕದ ಅಧ್ಯಕ್ಷರಾಗಿ ವಿಜಯನಗರದ ಚಲುವರಾಜು ಆಯ್ಕೆಯಾಗಿದ್ದಾರೆ.

ಇತ್ತೀಚಿಗೆ ನಗರದಲ್ಲಿ ಸಂಘಟನೆಯ ರಾಜ್ಯಾಧ್ಯಕ್ಷ ಚಿದರವಳ್ಳಿ ಮಹದೇವಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಕಾರ್ಯಕಾರಿ ಸಮಿತಿ ಪದಾಧಿಕಾರಿಗಳ ಆಯ್ಕೆ ಸಭೆ ನಡೆಯಿತು.

ಜಿಲ್ಲಾ ಉಪಾಧ್ಯ ಕ್ಷರಾಗಿ ಕೈಲಾಂಚ ಹೋಬಳಿ ಬನ್ನಿಕುಪ್ಪೆ ಗ್ರಾಮದ ಶ್ರೀನಿವಾಸಮೂರ್ತಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ರಾಮನಗರ ಟೌನ್ ವಿನಾಯಕನಗರ ಕೆ.ಶಿವಪ್ರಕಾಶ್, ಖಜಾಂಚಿಯಾಗಿ ಗಾಂಧಿ ನಗರದ ಗೋಪಾಲ್, ಜಂಟಿ ಕಾರ್ಯದರ್ಶಿಗಳಾಗಿ ತಿಮ್ಮೇಗೌಡನದೊಡ್ಡಿಯ ಗುರುಮಲ್ಲಯ್ಯ, ಕೇತೋಹಳ್ಳಿಯ ಶಿವಲಿಂಗಯ್ಯ, ಕೊತ್ತೀಪುರ ಗೋವಿಂದು.ಸಿ., ಸಂಘಟನಾ ಕಾರ್ಯದರ್ಶಿಗಳಾಗಿ ಕನಕಪುರ ತಾಲೂಕಿನ ಅರಕೆರೆ ಗ್ರಾಮದ ರಮೇಶ್, ರಾಮನಗರದ ಐಜೂರು ಮಲ್ಲೇಶ್ವರಂ ಬಸವರಾಜು. ಸಿ.ಬಿ., ಕುರುಬರಹಳ್ಳಿಯ ವೆಂಕಟೇಶಯ್ಯ, ಸಹ ಕಾರ್ಯದರ್ಶಿಗಳಾಗಿ ತಿಮ್ಮೇಗೌಡನದೊಡ್ಡಿ ಶೇಷಯ್ಯ, ತಮ್ಮನಾಯಕನಹಳ್ಳಿ ಚಂದ್ರಪ್ಪ ಅವರು ಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.

ಸಭೆಯಲ್ಲಿ ರಾಜ್ಯ ಸಂಘದ ಉಪಾಧ್ಯಕ್ಷ ಕೃಷ್ಣಮೂರ್ತಿ, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಸ್ವಾಮಿ, ನಗರಸಭೆ ಮಾಜಿ ಸದಸ್ಯ ಶಿವಶಂಕರ್ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net