

ರಾಮನಗರ
ಅಪಘಾತಕ್ಕೆ ಒಳಗಾಗಿದ್ದ ಕಾರನ್ನು ಟೋಯಿಂಗ್ ವಾಹನದ ಮೂಲಕ ಸಾಗಿಸುವ ವೇಳೆ ಉಂಟಾದ ಕಿಡಿಯಿಂದಾಗಿ ಕಾರು ಹೊತ್ತಿ ಹುರಿದಿರುವ ಘಟನೆ ಚನ್ನಪಟ್ಟಣ ತಾಲೂಕಿನ ಕೋಮನಹಳ್ಳಿ ಬಳಿಯ ಬೈಪಾಸ್ ರಸ್ತೆಯಲ್ಲಿ ಶುಕ್ರವಾರ ರಾತ್ರಿ ನಡೆದಿದೆ.
ಬೆಂಗಳೂರಿನಿಂದ ಮೈಸೂರಿಗೆ ಹೋಗುತ್ತಿದ್ದ ಟಾಟಾ ಹ್ಯಾರಿಯರ್ ಕಾರು ಲಂಬಾಣಿತಾಂಡ್ಯದ ಬೈಪಾಸ್ ರಸ್ತೆಯಲ್ಲಿ ಶುಕ್ರವಾರ ಮಧ್ಯಾನ್ನ ಅಪಘಾತಕ್ಕೆ ಒಳಗಾಗಿದ್ದು, ಈ ಕಾರು ಮೈಸೂರಿನ ಲಕ್ಷ್ನೀ ನಾರಾಯಣ ಎನ್ನುವರ ಕಾರು ಅಪಘಾತಕ್ಕೆ ತುತ್ತಾಗಿದೆ. ಈ ವೇಳೆ ಕಾರನ್ನು ಸ್ಥಳದಲ್ಲಿಯೇ ಬಿಟ್ಟು ತೆರಳಿದ್ದರು. ಈ ಸಂಭಂದ ರಾಮನಗರ ಟ್ರಾಫಿಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಶುಕ್ರವಾರ ರಾತ್ರಿ ಕಾರನ್ನು ಟೋಯಿಂಗ್ ವಾಹನದ ಮೂಲಕ ರಾಮನಗರಕ್ಕೆ ತೆಗೆದುಕೊಂಡು ಹೋಗುವಾಗ ಈ ಅವಘಡ ನಡೆದಿದೆ.
ಕಾರಿನ ಡಿಸೇಲ್ ಟ್ಯಾಂಕ್ ನಿಂದ ಡೀಸೆಲ್ ಸೋರಿಕೆಯಿಂದಾಗಿ ಉಂಟಾದ ಕಿಡಿಯಿಂದ ಕಾರು ಹೊತ್ತಿ ಹುರಿದಿದೆ. ಬೆಂಕಿ ತಗುಲಿದ ಕೂಡಲೇ ಟೋಯಿಂಗ್ ವಾಹನದವರು ಕಾರನ್ನು ರಸ್ತೆ ಪಕ್ಕಕ್ಕೆ ನಿಲ್ಲಿಸಿ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ಯತ್ನ ನಡೆಸಿದಾದರೂ ಅಷ್ಟರಲ್ಲಿ ಕಾರು ಸಂಪೂರ್ಣ ಬೆಂಕಿಗೆ ಆಹುತಿಯಾಗಿದೆ.