ಬಸ್ ಗಾಗಿ ಬೀದಿಗಳಿದ ವಿದ್ಯಾರ್ಥಿಗಳು ಎಬಿವಿಪಿ ನೇತೃತ್ವದಲ್ಲಿ ರಾಮನಗರದಲ್ಲಿ ಪ್ರತಿಭಟನೆ

RMGm-Ph-001-ABVP -News-Bus Samsye-Prathibatane-KSRTC Bus Stand -Ramanagara-3-8-2023
Published on

ರಾಮನಗರ: ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಬಸ್ ಸಮಸ್ಯೆ ಉಂಟಾಗಿದ್ದು ಪ್ರತಿದಿನ ಬಸ್ ತರಗತಿಗೆ ಹೋಗಲು ಆಗುತ್ತಿಲ್ಲ. ಸಮಸ್ಯೆ ಸರಿಪಡಿಸಬೇಕು, ಸ್ಥಳಕ್ಕೆ ಶಾಸಕರು ಬರಬೇಕು ಎಂದು ಪಟ್ಟು ಹಿಡಿದು ಶಾಲಾ ಕಾಲೇಜು ವಿದ್ಯಾರ್ಥಿಗಳು ರಾಮನಗರದ ಐಜೂರು ಸರ್ಕಾರಿ ಬಸ್ ನಿಲ್ದಾಣದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌  ನೇತೃತ್ವದಲ್ಲಿ ಬಸ್ ಗಳನ್ನು ತಡೆದು ಪ್ರತಿಭಟಿಸಿದರು.

ಪರೀಕ್ಷೆಗಳು ಹತ್ತಿರ ಬರುತ್ತಿವೆ. ಬೆಂಗಳೂರು ಮೈಸೂರು ರಸ್ತೆಯಲ್ಲಿ ಸಂಚರಿಸುವ ವಿದ್ಯಾರ್ಥಿಗಳ ಬಸ್ ಸಮಸ್ಯೆ ಹೇಳತೀರದು. ಕಾಲೇಜು ಸಮಯದಲ್ಲಿ ಒಂದೆರಡು ಬಸ್ ಮಾತ್ರ ಸಂಚಾರಕ್ಕೆ ಹಾಕಿ ಬಸ್ ವ್ಯವಸ್ಥೆ ಇದೆ ಎನ್ನುತ್ತಾರೆ. ಆದರೆ ಶಕ್ತಿ ಯೋಜನೆ ಬಂದ ಮೇಲೆ ಯಾವ ಬಸ್ ಕೂಡ ಖಾಲಿ ಇರುವುದಿಲ್ಲ ಗ್ರಾಮೀಣ ಪ್ರದೇಶದಿಂದ ಬರುವ ವಿದ್ಯಾರ್ಥಿಗಳು ಹೈರಾಣಾಗಬೇಕಿದೆ.

ವಿದ್ಯಾರ್ಥಿಗಳು ಶಾಲಾ-ಕಾಲೇಜಿಗೆ ತೆರಳುವ ಸಮಯದಲ್ಲಿ ಹಾಗೂ ಹಿಂತಿರುಗುವ ಸಮಯದಲ್ಲಿ ಬಸ್ಸಿನ ಸಂಖ್ಯೆಯನ್ನು ಹೆಚ್ಚಿಸಬೇಕು. ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಬಸ್ಸಿನ ವ್ಯವಸ್ಥೆಯನ್ನು ಕಲ್ಪಿಸಿಕೊಡಬೇಕು. ಈಗಾಗಲೇ ವಿದ್ಯಾರ್ಥಿನಿಯರಿಗೆ ಉಚಿತವಾಗಿ ಬಸ್ಸಿನ ಪ್ರಯಾಣವನ್ನು ಒದಗಿಸಿಕೊಟ್ಟಿರುವ, ವಿದ್ಯಾರ್ಥಿಗಳಿಗೂ ನೀಡಬೇಕು ಎಂದು ಎಬಿವಿಪಿ ಮುಖಂಡರು ಆಗ್ರಹಿಸಿದರು.

ಕೆಎಸ್ ಆರ್ ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಜಗದೀಶ್ ಪ್ರತೀಭಟನಾ ಸ್ಥಳಕ್ಕೆ ಬಂದು ವಿದ್ಯಾರ್ಥಿಗಳ ಮನವಿ ಪಡೆದು ಬಸ್ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದರು.

ಎಬಿವಿಪಿ ಜಿಲ್ಲಾ ಸಂಚಾಲಕ ಸುಹಾಸ್, ನಗರ ಕಾರ್ಯದರ್ಶಿ ಜ್ಞಾನೇಶ್, ಸಹ ಕಾರ್ಯದರ್ಶಿ ಪ್ರಶಾಂತ್, ಭುವನ್‌ರಾವ್, ಅಧ್ಯಯನ ವೃತ್ತ ಪ್ರಮುಖ್ ಭುವನ್, ಹಾಸ್ಟೇಲ್ ಪ್ರಮುಖ್ ಸರ್ವೇಶ್, ಪುನೀತ್, ವಿಕಾಶ್, ನವೀನ್, ವಿಕ್ಕಿ, ಸಾಗರ್, ಶ್ರೀನಿವಾಸ್, ಚಂದು ಇದ್ದರು.

ವಿದ್ಯಾರ್ಥಿಗಳ ಸಮಯಕ್ಕೆ ಸರಿಯಾಗಿ ಸಾರಿಗೆ ಬಸ್ ವ್ಯವಸ್ಥೆಇಲ್ಲವಾಗಿವೆ. ಶಕ್ತಿ ಯೋಜನೆ ಪರಿಣಾಮ ಬಸ್‌ನಲ್ಲಿ ಪ್ರಯಾಣ ವಿದ್ಯಾರ್ಥಿಗಳಿಗೆ ಕಷ್ಟವಾಗಿದೆ ಬಸ್‌ಗಳಲ್ಲಿ ಕಾಲಿಡಲು ಸ್ಥಳವಿಲ್ಲ. ಹೆಚ್ಚಿನ ಬಸ್ ವ್ಯವಸ್ಥೆ ಮಾಡುವಂತೆ ಹಲವು ಭಾರಿ ಮನವಿ ಮಾಡಿದರು ಯಾವುದೇ ಪ್ರಯೋಜನವಾಗಿಲ್ಲ. ಶಾಸಕ ಇಕ್ಬಾಲ್ ಹುಸೇನ್‌ ಅವರ ಗಮನಕ್ಕೆ ನಮ್ಮ ಸಮಸ್ಯೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಸಾರಿಗೆ ಅಧಿಕಾರಿಗಳು ಕೇವಲ ಭರವಸೆಯಲ್ಲೇ ಕಾಲ ದೂಡುತ್ತಿದ್ದಾರೆ.

ಸುಹಾಸ್, ಎಬಿವಿಪಿ ಸಂಘಟನೆ ಮುಖಂಡ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net