ಕೊಂಡಾಪುರ ಬಳಿ ಮಳೆಗೆ ಕಣ್ವ ಸೇತುವೆ ಕುಸಿತ

WhatsApp Image 2022-08-07 at 8.02.47 AM
Published on

ರಾಮನಗರ: ಕಳೆದ ಒಂದು ವರ್ಷದ ಹಿಂದೆ ನಿರ್ಮಾಣ ಮಾಡಲಾಗಿದ್ದ ಸೇತುವೆಯೊಂದು ಮಳೆಯ ರಭಸಕ್ಕೆ ಕೊಚ್ಚಿ ಹೋಗಿರುವ ಘಟನೆ ಚನ್ನಪಟ್ಟಣ ತಾಲೂಕು ಕೊಂಡಾಪುರ ಬಳಿ ನಡೆದಿದೆ.

ಜಿಲ್ಲೆಯಲ್ಲಿ ಕಳೆದ ಹಲವಾರು ದಿನಗಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಜಲಾಶಯಗಳು ತುಂಬಿವೆ. ಇವುಗಳಿಂದ ಹೆಚ್ಚಿನ ನೀರನ್ನು ಹೊರ ಬಿಡಲಾಗುತ್ತಿದೆ. ಕಣ್ವ ಜಲಾಶಯದಿಂದ ನೀರನ್ನು ಹೊಳೆಗೆ ಹರಿಯ ಬಿಟ್ಟ ಪರಿಣಾಮ ಕೊಂಡಾಪುರ ಮತ್ತು ಬಾಣಗಳ್ಳಿ ನಡುವೆ ಸಂಪರ್ಕ ಕಲ್ಪಿಸುವ ಸೇತುವೆ ಕೊಚ್ಚಿ ಹೋಗಿದೆ.

ಕಳೆದ ವರ್ಷವಷ್ಟೇ ಸೇತುವೆಯನ್ನು ನಿರ್ಮಾಣ ಮಾಡಲಾಗಿತ್ತು. ಈ ವೇಳೆ ಕಳಪೆ ಕಾಮಗಾರಿ ಮಾಡಲಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದರು. ಆದರೆ ಈ ಬಗ್ಗೆ ಹಿರಿಯ ಅಧಿಕಾರಿಗಳು ಗಮನ ಹರಿಸಿರಲಿಲ್ಲ. ಇದೀಗ ಸೇತುವೆ ಕುಸಿದು ಹೋಗಿದ್ದು, ಎರಡೂ ಗ್ರಾಮದ ಜನತೆ ಪರಸ್ಪರ ಸಂಪರ್ಕ ಸಾಧಿಸಲು ಸುಮಾರು 8-10 ಕಿ ಮೀ ದೂರ ಕ್ರಮಿಸಬೇಕಿದೆ.

ಆಗ್ರಹ: ಸೇತುವೆ ಕುಸಿತದ ಸಂಪರ್ಕ ಕಡಿದುಕೊಂಡಿರುವ ಸ್ಥಳೀಯರು ಜಿಲ್ಲಾಢಳಿತ ಮತ್ತು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ಸೇತುವೆಯನ್ನು ದುರಸ್ಥಿ ಮಾಡಬೇಕು ಹಾಗೂ ಕಳಪೆ ಕಾಮಗಾರಿ ಮಾಡಿದ ಗುತ್ತಿಗೆದಾರ ಹಾಗು ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net