ಅರ್ಕಾವತಿ ನದಿಯಲ್ಲಿ ಮುಳುಗಿ ಬಾಲಕ ಸಾವು

drown
Published on

ರಾಮನಗರ : ನಗರದ ದ್ಯಾವರಸೇಗೌಡನದೊಡ್ಡಿ ಬಳಿಯ ಅರ್ಕಾವತಿ ನದಿಯಲ್ಲಿ ಗೆಳೆಯರ ಜತೆ ಈಜಲು ಹೋಗಿದ್ದ ಬಾಲಕ ನೀರಿನಲ್ಲಿ ಮೃತಪಟ್ಟಿದ್ದಾನೆ.

ರಾಮನಗರ ಟೌನಿನ ವಿನಾಯಕನಗರ ನಿವಾಸಿ ಕಿಶೋರ್ (14) ಮೃತ.

ಕಿಶೋರ್ 8ನೇ ತರಗತಿ ವಿದ್ಯಾರ್ಥಿಯಾಗಿದ್ದು, ಭಾನುವಾರ ಮಧ್ಯಾಹ್ನ ಗೆಳೆಯರೊಂದಿಗೆ ಆಟ ಆಡುವಾಗ ನದಿ ಕಡೆ ಹೋಗಿದ್ದಾರೆ. ಈ ವೇಳೆ ಕಿಶೋರ್ ಈಜಲು ನೀರಿಗಿಳಿದಿದ್ದಾಗ ಮುಳುಗಿದ್ದಾನೆ. ಆತ ಮುಳುಗುತ್ತಿರುವುದನ್ನು ಕಂಡು ಗಾಬರಿಗೊಂಡ ಗೆಳೆಯರು ಆತನನ್ನು ರಕ್ಷಿಸದೆ ಆ ಸ್ಥಳದಿಂದ ತೆರಳಿದ್ದಾರೆ. ಇತ್ತ ಸಂಜೆಯಾದರೂ ಮಗ ಮನೆಗೆ ಬಾರದ್ದನ್ನು ಗಮನಿಸಿದ ಕಿಶೋರ್ ಪಾಲಕರು ರಾಮನಗರ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.

ಸೋಮವಾರ ಬೆಳಗ್ಗೆ ಕಿಶೋರ್ ಕುರಿತು ಪೊಲೀಸರು, ಆತನ ಪಾಲಕರು ಗೆಳೆಯರನ್ನು ವಿಚಾರಿಸಿದಾಗ ನೀರಿನಲ್ಲಿ ಮುಳುಗಿ ಹೋಗಿರುವ ವಿಷಯ ಬಾಯಿಬಿಟ್ಟಿದ್ದಾರೆ. ಕೂಡಲೇ ಪೋಲೀಸರು, ಮಕ್ಕಳ ಪಾಲಕರು ಸ್ಥಳಕ್ಕೆ ಧಾವಿಸಿದರು. ಅಗ್ನಿಶಾಮಕ ಠಾಣೆ ಸಿಬ್ಬಂದಿ, ಅಧಿಕಾರಿಗಳು ಪರಿಶೀಲನೆ ನಡೆಸಿ ನದಿಯಿಂದ ಕಿಶೋರ್ ಮೃತದೇಹ ಪತ್ತೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net