ವೀಲಿಂಗ್ ಮಾಡಿ ಪೊಲೀಸರಿಗೆ ಸಿಕ್ಕಿ ಬಿದ್ದರು

4efc975f-56cf-475e-9606-c6310e6c959a
Published on

ರಾಮನಗರ

ಬೆಂಗಳೂರು - ಮೈಸೂರು ದಶಪಥ ಹೆದ್ದಾರಿಯಲ್ಲಿ ವೀಲಿಂಗ್ ಮಾಡಿ ವಾಹನ ಸವಾರರಿಗೆ ತೊಂದರೆ ಕೊಡುತ್ತಿದ್ದ ಪುಂಡರು ಈಗ ಕುಂಬಳಗೂಡು ಪೊಲೀಸರ ಅತಿಥಿಗಳಾಗಿದ್ದಾರೆ.

ಕಳೆದ ನಾಲ್ಕೈದು ತಿಂಗಳಿಂದಲೂ ಎಕ್ಸ್ ಪ್ರೆಸ್ ವೇಯಲ್ಲಿ ವೀಲಿಂಗ್ ಮಾಡುವ ಪುಂಡರ ವಿಡಿಯೋಗಳು ಜಾಲತಾಣಗಳಲ್ಲಿ ಹರಿದಾಡಿದ್ದವು. ಕುಂಬಳಗೊಡು, ಬಿಡದಿ, ಕೆಂಗೇರಿ ರಸ್ತೆಯಲ್ಲಿ ವೀಲಿಂಗ್ ಮಾಡಿ ಪುಂಡರು ವಾಹನ ಸವಾರರಿಗೆ ತೊಂದರೆ ಕೊಡುತ್ತಿದ್ದರು.

ಇಷ್ಟೇ ಅಲ್ಲದೆ ಒನ್ ವೇಯಲ್ಲಿಯೂ ವೀಲಿಂಗ್ ಮಾಡಿ ಹುಚ್ಚಾಟ ನಡೆಸಿದ್ದರು. ಸಮಾಜಿಕ ಜಾಲತಾಣದಲ್ಲಿನ ವೀಡಿಯೋ ಮೂಲ ಹುಡುಕಿದ ಪೊಲೀಸರು ಸದ್ಯ ನಾಲ್ವರು ಆರೋಪಿಗಳನ್ನ ವಶಕ್ಕೆ ಪಡೆದಿದ್ದಾರೆ.

ಮೊಹಮ್ಮದ್ ಹುಸೇನ್, ವಾಸೀಂ ಖಾನ್, ಮುಜಾಮೀನ್, ಸುಲ್ತಾನ್ ಬಂಧಿತ ಆರೋಪಿಗಳಾಗಿದ್ದು, ಬಂಧಿತರಿಂದ 2 ಬೈಕ್ ವಶಪಡಿಸಿಕೊಳ್ಳಲಾಗಿದೆ.

ಹುಡುಗಿ ಯೋರ್ವಳನ್ನ ಹಿಂಬದಿ ಕೂರಿಸಿಕೊಂಡು ವೀಲಿಂಗ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಫೇಮಸ್ ಆಗಲು ಈ ರೀತಿ ಹುಚ್ಚಾಟ ನಡೆಸುತ್ತಿದ್ದರು ಎನ್ನಲಾಗಿದೆ. ಈ ಸಂಬಂಧ ಕುಂಬಳಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net