ಹೊಸ ರೈಡ್ ಪರಿಚಯಿಸಿದ ವಂಡರ್ ಲಾ

01-07-bidadi-1
Published on

ಬಿಡದಿ : ಪ್ರವಾಸಿಗರಿಗೆ ಮನರಂಜನೆ ನೀಡುವ ಜತೆಗೆ ಅಷ್ಟೇ ಸುರಕ್ಷತಾ ಕ್ರಮಗಳನ್ನು ವಂಡರ್ ಲಾ ನೀಡುತ್ತಿದ್ದು, ಇದೀಗ ಹೊಸ ರೈಡ್‌ಗಳನ್ನು ಪರಿಚಯಿಸುತ್ತಿದೆ ಎಂದು ನಟಿ ಅದಿತಿ ಪ್ರಭುದೇವ ತಿಳಿಸಿದರು.

ಬಿಡದಿಯ ವಂಡರ್ ಲಾ ಪಾರ್ಕ್‌ನಲ್ಲಿ ಶನಿವಾರ ಕೆರಿಬಿಯನ್ ವರ್ಲ್ ಗೇಮ್ ಉದ್ಘಾಟಿಸಿ ಮಾತನಾಡಿದರು.

ವಂಡರ್ ಲಾ ಈಗಾಗಲೇ ಸಾಕಷ್ಟು ಗೇಮ್ಗಳನ್ನು ಪರಿಚಯಿಸಿದೆ. ಅದರಲ್ಲೂ ಹೊರ ದೇಶಗಳಲ್ಲಿ ಕಾಣಬಹುದಾದ ರೈಡ್‌ಗಳನ್ನೂ ಅಳವಡಿಸಲಾಗಿದೆ. ನಾನೂ ಸಾಕಷ್ಟು ಬಾರಿ ಇಲ್ಲಿಗೆ ಬಂದು ಕಾಲ ಕಳೆದಿದ್ದೇನೆ. ಇದೊಂದು ಉತ್ತಮ ಮನರಂಜನಾ ಪಾರ್ಕ್ ಎಂದು ಬಣ್ಣಿಸಿದರು.

ಪಾರ್ಕ್‌ನಲ್ಲಿ ಮಕ್ಕಳಿಂದ, ಎಲ್ಲ ವಯೋಮಾನದ ಜನರು ಬಂದು ಕಾಲ ಕಳೆಯಬಹುದಾಗಿದೆ. ಈ ಜಾಗದಲ್ಲಿ ಸಮಯ ಹೋಗುವುದೇ ಗೊತ್ತಾಗುವುದಿಲ್ಲ ಎಂದರು.

ವಂಡರ್ ಲಾ ವ್ಯವಸ್ಥಾಪಕ ನಿರ್ದೇಶಕ ಅರುಣ್ ಕೆ.ಚಿಟ್ಟಿಲಪ್ಪಿಲ್ಲಿ ಮಾತನಾಡಿ, ನಮ್ಮ ಪಾರ್ಕ್‌ನಲ್ಲಿ ಪ್ರವಾಸಿಗರಿಗೆ ಹೊಸತನದ ರೈಡ್‌ಗಳನ್ನು ಪರಿಚಯಿಸುವುದೇ ನಮ್ಮ ಆದ್ಯತೆಯಾಗಿದೆ. ಈ ನಿಟ್ಟಿನಲ್ಲಿ ನಾಲ್ಕು ಹೊಸ ಪೂಲ್ನಲ್ಲಿಯೇ ಬಾರ್, ಕೆರಿಬಿಯನ್ ವರ್ಲ್, ಮೈ ಕಿಂಡಾ ಪ್ಲೇಸ್, ಲಾನ್‌ಗಳನ್ನು ಪರಿಚಯಿಸಲಾಗಿದೆ ಎಂದರು.

ಕೆರಿಬಿಯನ್ ವರ್ಲ್ ದೇಶದಲ್ಲೇ ಪ್ರಥಮವಾಗಿ ನಮ್ಮ ಪಾರ್ಕ್‌ನಲ್ಲಿ ಅಳವಡಿಸಲಾಗಿದೆ. ನಮ್ಮ ಪಾರ್ಕ್‌ಗೆ ಬರುವ ಪ್ರವಾಸಿಗರಿಗೆ ಯಾವುದೇ ನಿರಾಸೆ ಆಗಬಾರದು. ಕಾರ್ಪೋರೇಟ್ ಇವೆಂಟ್, ದೊಡ್ಡ ಪಾರ್ಟಿ ಹಾಗೂ ವಿವಿಧ ರೀತಿಯ ಆಚರಣೆಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ 4000ಕ್ಕೂ ಹೆಚ್ಚು ಜನರು ಸೇರುವ ಸಾಮರ್ಥ್ಯದ ಲಾನ್ ಇದಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net