ವ್ಹೀಲಿಂಗ್ ಮಾಡಿದ್ದ ಯುವಕ ಬಿಡದಿ ಪೊಲೀಸರ ವಶಕ್ಕೆ

IMG-20230711-WA0148.jpg
Published on

ಬಿಡದಿ: ಸ್ಕೂಟರ್ ನಲ್ಲಿ ವ್ಹೀಲಿಂಗ್ ಮಾಡಿದ್ದ ಯುವಕನನ್ನು ಬಿಡದಿ ಪೊಲೀಸರು ವಶಕ್ಕೆ ಪಡೆದಿರುವ ಘಟನೆ ನಡೆದಿದೆ.

ಹಾರೋಹಳ್ಳಿ- ಬಿಡದಿ ಮುಖ್ಯ ರಸ್ತೆಯ ತಿಮ್ಮೇಗೌಡನದೊಡ್ಡಿ ಗ್ರಾಮದ ಬಳಿ ಡಿಯೋ ಸ್ಕೂಟರ್ ನಲ್ಲಿ ಯುವಕನೊಬ್ಬ ವ್ಹೀಲಿಂಗ್ ಮಾಡಿದ್ದ. ಈ ವೀಡಿಯೋವನ್ನ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡಲಾಗಿತ್ತು. ಈ ವೀಡಿಯೋ ವೈರಲ್ ಆಗುತ್ತಿದಂತೆ ಹೆಚ್ಚೆತ್ತ ಬಿಡದಿ ಪೊಲೀಸರು ವ್ಹೀಲಿಂಗ್ ಮಾಡಿದ್ದ ಯುವಕನ್ನ ಹಾಗೂ ಡಿಯೋ ಸ್ಕೂಟರ್‌ನ್ನ ವಶಕ್ಕೆ ಪಡೆದಿದ್ದಾರೆ.

ಈ ಪ್ರಕರಣ ಸಂಬಂಧ ಬಿಡದಿ ಪೊಲೀಸರು ರವಿ ಹಾಗೂ ವ್ಹೀಲಿಂಗ್ ಮಾಡಲು ಬಳಸಿದ್ದ ವಾಹನವನ್ನ ಸೋಮವಾರ ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.

ಇದೇ ತಿಂಗಳ 4 ರಂದು ತಿಮ್ಮೇಗೌಡನದೊಡ್ಡಿ ಗ್ರಾಮದ ಯುವಕ ರವಿ ಸಂಜೆ ವೇಳೆ ಸ್ನೇಹಿತನ ಡಿಯೋ ಸ್ಕೂಟರ್ ಪಡೆದು ಅದರಲ್ಲಿ ವ್ಹೀಲಿಂಗ್ ಮಾಡಿದ್ದ. ವ್ಹೀಲಿಂಗ್ ಮಾಡುವ ದೃಶ್ಯವನ್ನ ಸ್ನೇಹಿತನ ಮೊಬೈಲ್ ನಲ್ಲಿ ವೀಡಿಯೋ ಮಾಡಿಸಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದ ಈ ವೀಡಿಯೋ ಸಕತ್ ವೈರಲ್ ಆಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net