ರಾಮನಗರ- ಬಿಡದಿಗೆ ಹೆದ್ದಾರಿಯಿಂದ ಸಂಪರ್ಕ ಕಲ್ಲುಗೋಪಹಳ್ಳಿ ಬಳಿ ಪ್ರವೇಶ-ನಿರ್ಗಮನಕ್ಕೆ ಅವಕಾಶ ವಾಹನ ಸವಾರರಿಗೆ ನಿರಾಳ

12-02-bidadi-2
Published on

ಚೇತನ್ ಚಕ್ಕೆರೆ ಬಿಡದಿ

ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ರಾಮನಗರ ಹಾಗೂ ಬಿಡದಿಗೆ ಎಂಟ್ರಿ ಹಾಗೂ ಎಕ್ಸಿಟ್ ಇರದೆ ಉಂಟಾಗಿದ್ದ ತೊಡಕು ಈಗ ನಿವಾರಣೆಯಾಗಿದೆ.

ಬಹು ನಿರೀಕ್ಷಿತ ಹೆದ್ದಾರಿಯ ಮೊದಲ ಹಂತದ ಕಾಮಗಾರಿ ಬಹುತೇಕ ಮುಕ್ತಾಯದ ಹಂತಕ್ಕೆ ಬಂದಿದೆ. ಹೆದ್ದಾರಿಯಲ್ಲಿ ಸರ್ವೀಸ್ ರಸ್ತೆಗೆ ಲಿಂಕ್ ವಾಡಲು ಜಾಗ ಬಿಟ್ಟಿರಲಿಲ್ಲ. ಇದರಿಂದಾಗಿ ಬೆಂಗಳೂರಿನಿಂದ ರಾಮನಗರಕ್ಕೆ ಮೈಸೂರು ಕಡೆಯಿಂದ ಬಿಡದಿ ಪಟ್ಟಣಕ್ಕೆ ಹೋಗಲು ರಸ್ತೆ ಇರಲಿಲ್ಲ. ಇದು ವಾಹನಗಳ ಸವಾರರಿಗೆ ತಲೆ ನೋವಾಗಿತ್ತು.

ಕಲ್ಲುಗೋಪಹಳ್ಳಿ ಬಳಿ ಎಂಟ್ರಿ-ಎಕ್ಷಿಟ್: ಬಿಡದಿ ಪಟ್ಟಣದಿಂದ 2 ಕಿಲೋಮೀಟರ್ ದೂರದ ಕಲ್ಲುಗೋಪಹಳ್ಳಿ ಬಳಿ ಬೆಂಗಳೂರಿನಿಂದ ಬರುವ ವಾಹನಗಳು ಸರ್ವೀಸ್ ರಸ್ತೆ ಮೂಲಕ ರಾಮನಗರಕ್ಕೆ ತೆರಳಲು ಅವಕಾಶ ಕಲ್ಪಿಸಲಾಗಿದೆ. ಅದೇ ರೀತಿ ಮೈಸೂರಿನಿಂದ ಬರುವ ವಾಹನಗಳು ಬಿಡದಿ ಕಡೆಗೆ ತಿರುವು ಪಡೆಯಲೂ ಸಹ ಇಲ್ಲಿಯೇ ಅನುವು ವಾಡಿಕೊಡಲಾಗಿದೆ. ಬಿಡದಿ ಕಡೆಯಿಂದ ಹಳೆಯ ಹೆದ್ದಾರಿಯಲ್ಲಿ ಬರುವ ಸವಾರರು ಮೈಸೂರಿಗೆ ಪ್ರಯಾಣ ವಾಡಲು ಇದು ಅನುಕೂಲವಾಗಲಿದೆ. ರಾಮನಗರದ ಕಡೆಯಿಂದ ಬರುವ ವಾಹನಗಳು ಬೆಂಗಳೂರು ಕಡೆಗೆ ತೆರಳಲು ಕೂಡ ಎಂಟ್ರಿ ರಸ್ತೆ ಉಪಯೋಗವಾಗಲಿದೆ.

ಪ್ರತಾಪ್ ಸಿಂಹ ವೀಕ್ಷಣೆ: ಹೆದ್ದಾರಿಯಲ್ಲಿ ರಾಮನಗರ ಹಾಗೂ ಬಿಡದಿ ಪಟ್ಟಣಕ್ಕೆ ಸಂಪರ್ಕ ಕಲ್ಪಿಸಿರುವ ಸ್ಥಳವನ್ನು ಮೈಸೂರು ಸಂಸದ ಪ್ರತಾಪ್ ಸಿಂಹ ರಾಷ್ಟ್ರೀಯ ಪ್ರಾಧಿಕಾರದ ಅಧಿಕಾರಿಗಳು ಹಾಗೂ ಹೆದ್ದಾರಿ ಗುತ್ತಿಗೆ ಪಡೆದಿರುವ ಡಿಬಿಎಲ್ ಕಂಪನಿಯ ಅಧಿಕಾರಿಗಳ ಜೊತೆಗೆ ಖುದ್ದಾಗಿ ವೀಕ್ಷಣೆ ವಾಡಿದ್ದರು.

ಸುತ್ತಿಬಳಸಿ ಬರಬೇಕಾದ ಪರಿಸ್ಥಿತಿ ಇತ್ತು: ಹೆದ್ದಾರಿಯಲ್ಲಿ ಬರುವ ವಾಹನಗಳು ತಾಲೂಕು ಕೇಂದ್ರಗಳಿಗೆ ಸಂಪರ್ಕ ಪಡೆಯಲು ಸೂಕ್ತ ಜಾಗವಿಲ್ಲದೆ ಸುತ್ತಿ ಬಳಸಬೇಕಾದ ಪರಿಸ್ಥಿತಿ ನಿರ್ವಾಣವಾಗಿತ್ತು. ನೈಸ್ ರಸ್ತೆಯ ಬಳಿ ಮೈಸೂರು ಕಡೆಗೆ ಬರುವ ವಾಹನಗಳು ಬಿಡದಿ ಹಾಗೂ ರಾಮನಗರಕ್ಕೆ ಸಂಪರ್ಕ ಪಡೆದುಕೊಳ್ಳಲು ಸರಿಯಾದ ಲಿಂಕ್ ರಸ್ತೆ ಇರಲಿಲ್ಲ. ಈ ಸಮಸ್ಯೆಗಳಿಗೆ ಇದೀಗ ಅಧಿಕಾರಿಗಳು ತಿಲಾಂಜಲಿ ಇಟ್ಟಿದ್ದಾರೆ.

ದಶಪಥ ಹೆದ್ದಾರಿಯಲ್ಲಿ ರಾಮನಗರ ಹಾಗೂ ಬಿಡದಿ ಪಟ್ಟಣಕ್ಕೆ ಹೆದ್ದಾರಿಯಿಂದ ಸರ್ವಿಸ್ ರಸ್ತೆಗೆ ತಿರುವು ಪಡೆದುಕೊಳ್ಳಲು ಜಾಗ ಬಿಟ್ಟಿರಲಿಲ್ಲ. ಈ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದಿದ್ದವು. ಈ ನಿಟ್ಟಿನಲ್ಲಿ ಅಧಿಕಾರಿಗಳ ಜತೆೆ ವಾತನಾಡಿ ಕಲ್ಲುಗೋಪಹಳ್ಳಿ ಬಳಿ ರಾಮನಗರ ಹಾಗೂ ಬಿಡದಿ ಪಟ್ಟಣಕ್ಕೆ ಎಕ್ಸಿಟ್ ಹಾಗೂ ಎಂಟ್ರಿ ಕಲ್ಪಿಸಲಾಗಿದೆ.

ಪ್ರತಾಪ್ ಸಿಂಹ, ಸಂಸದ

ಸ್ಥಳೀಯರಿಗೆ ಲಿಂಕ್ ರಸ್ತೆಗಳಿಲ್ಲದೆ ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ವಾಣವಾಗಿತ್ತು. ಇದೀಗ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಕಲ್ಲುಗೋಪಹಳ್ಳಿ ಬಳಿ ಬಿಡದಿ ಕಡೆಗೆ ಹಾಗೂ ರಾಮನಗರದ ಕಡೆಗೆ ಎಂಟ್ರಿ ಹಾಗೂ ಎಕ್ಸಿಟ್ ಜಾಗ ಕಲ್ಪಿಸಿದ್ದಾರೆ.

ಬಾನಂದೂರು ನಂಜುಂಡಿ, ವಾಹನ ಸವಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net