ಬಿಡದಿ ಬಳಿ ದಶಪಥದಲ್ಲಿ ಸರಣಿ ಅಪಘಾತ

IMG-20230714-WA0057.jpg
Published on

ಬಿಡದಿ: ಬೆಳ್ಳಂಬೆಳಿಗ್ಗೆ ಬೆಂಗಳೂರು- ಮೈಸೂರು ದಶಪಥ ಹೆದ್ದಾರಿಯಲ್ಲಿ ಸರಣಿ ಅಪಘಾತ ನಡೆದಿದೆ. ಬಿಡದಿಯ ನೆಲ್ಲಿಗುಡ್ಡೆ ಕೆರೆಯ ಪಕ್ಕದಲ್ಲಿನ ಹೆದ್ದಾರಿಯಲ್ಲಿ ಲಾರಿ, ಬಸ್ಸು, ಕಾರು ನಡುವೆ ಅಪಘಾತ ನಡೆದಿದೆ.

ಮೈಸೂರು ಕಡೆಯಿಂದ ಬೆಂಗಳೂರು ಕಡೆಗೆ ಸಂಚಾರ ಮಾಡುತ್ತಿದ್ದ ಈ ಮೂರು ವಾಹನಗಳ ನಡುವೆ ಅಪಘಾತ ನಡೆದು ಕಾರಿನಲ್ಲಿದ್ದ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಲಾರಿಗೆ ಮೊದಲು ಐರಾವತ ಬಸ್ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ ಬಸ್ ಹಿಂಬಂದಿ ಬರುತ್ತಿದ್ದ ಕಾರು ಬಸ್ಸಿಗೆ ಡಿಕ್ಕಿ ಹೊಡೆದು ಸರಣಿ ಅಪಘಾತ ನಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ.

ಸರಣಿ ಅಪಘಾತದಿಂದ ಮೂರು ವಾಹನಗಳು ಜಖಂ ಗೊಂಡಿದ್ದು ಸ್ಥಳಕ್ಕೆ ಬಿಡದಿ ಪೊಲೀಸರು ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net