ರೋಟರಿಯಿಂದ ಶೈಕ್ಷಣಿಕ, ಸಾಮಾಜಿಕ ಕಾರ್ಯಹೆಗ್ಗಳಿಕೆ ಎಂದ ಬಿಡದಿ ಸೆಂಟ್ರಲ್​ ಅಧ್ಯಕ್ಷ ಮಲ್ಲೇಶ್​

06-07-bidadi-2
Published on

ಬಿಡದಿ

ನಮ್ಮ ಅಧಿಕಾರದ ಅವಧಿಯಲ್ಲಿ ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಸಾಕಷ್ಟು ಕೆಲಸಗಳನ್ನು ಮಾಡಲಾಗಿದೆ ಎಂದು ರೋಟರಿ ಬಿಡದಿ ಸೆಂಟ್ರಲ್​ ಅಧ್ಯಕ್ಷ ಮಲ್ಲೇಶ್​ ಹೇಳಿದರು.

ಪಟ್ಟಣದ ರೋಟರಿ ಸಂಸ್ಥೆ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಿಡದಿ ಭಾಗದಲ್ಲಿ ಕಳೆದ ಹತ್ತು ವರ್ಷಗಳಿಂದ ರೋಟರಿ ಸಂಸ್ಥೆ ಕೆಲಸ ಮಾಡುತ್ತಿದೆ. ಸಂಸ್ಥೆಯಿಂದ ಭರತ್​ ಕೆಂಪಣ್ಣ ಆಸ್ಪತ್ರೆಯ ಸಹಯೋಗದಲ್ಲಿ ಡಯಾಲಿಸಿಸ್​ ಸೆಂಟರ್​ ತೆರೆಯಲಾಗಿದ್ದು, ರಿಯಾಯಿತಿ ದರದಲ್ಲಿ ಸೇವೆ ನೀಡಲಾಗುತ್ತಿದೆ ಎಂದರು.

ಒಂದು ವರ್ಷದಲ್ಲಿ ಈ ಭಾಗದ 2000 ಸರ್ಕಾರಿ ಶಾಲಾ ಮಕ್ಕಳಿಗೆ ನೋಟ್​ಬುಕ್​ ವಿತರಣೆ, ಮಹಿಳಾ ಸಬಲೀಕರಣದ ಹೆಸರಿನಲ್ಲಿ 25 ವಿದ್ಯಾರ್ಥಿನಿಯರಿಗೆ ಸೈಕಲ್​, 50 ಮಂದಿ ವಿಕಲಚೇತನರಿಗೆ ವೀಲ್​ಚೇರ್​, ರಕ್ತದಾನ ಶಿಬಿರ ಆಯೋಜನೆ ಮಾಡಿ 780 ಯುನಿಟ್​ ರಕ್ತ ಸಂಗ್ರಹಣೆ ಮಾಡಲಾಗಿದೆ ಎಂದರು.

ಗ್ರಾಮೀಣ ವಿದ್ಯಾರ್ಥಿಗಳಿಗೆ ಉತ್ತೇಜನ ನೀಡುವ ಸಲುವಾಗಿ ರೋಟರಿ ಸಂಸ್ಥೆಯಿಂದ ಹೋಬಳಿ ಮಟ್ಟದ ಕಬ್ಬಡಿ ಹಾಗೂ ವಾಲಿಬಾಲ್​ ಪಂದ್ಯಾವಳಿಗಳನ್ನು ಆಯೋಜನೆ ಮಾಡಲಾಗಿತ್ತು. ನೆಲ್ಲಿಗುಡ್ಡೆ ಕೆರೆ ಸೇರಿ ಸರ್ಕಾರಿ ಶಾಲಾ ಆವರಣಗಳಲ್ಲಿ ನೂರಾರು ಗಿಡಗಳನ್ನು ನೆಡಲಾಗಿದೆ. ಈ ಸೇವೆಗಳನ್ನು ಗುರುತಿಸಿ ಸಂಸ್ಥೆಗೆ ನೇಷನ್ಸ್​ ಬಿಲ್ಡ್​ ಅವಾರ್ಡ್​ ಸೇರಿ ಹಲವು ಪ್ರಶಸ್ತಿಗಳು ಸಂದಿವೆ ಎಂದರು.

ಸದಸ್ಯರಾದ ಚಿಕ್ಕಣ್ಣಯ್ಯ, ಬಸವರಾಜ್​ ಅರಸ್​, ಶಿವಶಂಕರ್​, ವಸಂತ್​ ಕುಮಾರ್​, ರೇಣುಕಪ್ಪ, ಶಿವಸ್ವಾಮಿ, ಭರತ್​ ಕೀರ್ತಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net