ಸಾವಿಗೆ ರಸ್ತೆ ಗುಂಡಿ ಕಾರಣ ಬಿಡದಿ ಕೈಗಾರಿಕೆ ಸಂಘದ ಎದುರು ಶವ ಇಟ್ಟು ಪ್ರತಿಭಟನೆ

22-09-bidadi-3
Published on

 ಬಿಡದಿ

ರಸ್ತೆಯಲ್ಲಿದ್ದ ಗುಂಡಿಗೆ ಬಿದ್ದು ಗಾಯಗೊಂಡಿದ್ದ ಬೈಕ್​ ಸವಾರ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದು, ಆಕ್ರೋಶಗೊಂಡ ಕುಟುಂಬ ಸದಸ್ಯರು ಮತ್ತು ಗ್ರಾಮಸ್ಥರು ಸಾವಿಗೆ ರಸ್ತೆ ನಿರ್ವಹಣೆ ಮಾಡಬೇಕಾದ ಬಿಡದಿ ಕೈಗಾರಿಕಾ ಸಂಘದವರೇ ಕಾರಣ ಎಂದು ಆರೋಪಿಸಿ ಸಂದ ಕಚೇರಿ ಎದುರು ಗುರುವಾರ ಶವ ಇಟ್ಟು ಪ್ರತಿಭಟನೆ ನಡೆಸಿದರು.

ಮೂರು ದಿನಗಳ ಹಿಂದೆ ಅಬ್ಬನಕುಪ್ಪೆ ಗ್ರಾಮದ ಆನಂದ್​ (33) ಕೈಗಾರಿಕಾ ಪ್ರದೇಶದ ಇನ್ನೋವೇಟಿವ್​ ಫಿಲ್ಮ್​ ಸಿಟಿ ಬಳಿ ಬೈಕ್​ನಲ್ಲಿ ಹೋಗುತ್ತಿದ್ದಾಗ ಸ್ಕಿಡ್​ ಆಗಿ ಬಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಮೃತಪಟ್ಟರು.

ಕೈಗಾರಿಕಾ ಪ್ರದೇಶದ ರಸ್ತೆ ನಿರ್ವಹಣೆಯನ್ನು ಬಿಡದಿ ಕೈಗಾರಿಕೆಗಳ ಸಂಘದ ವತಿಯಿಂದ ಉಸ್ತುವಾರಿ ಮಾಡಲಾಗುತ್ತದೆ. ಹಾಗಾಗಿ ಆನಂದ್​ ಸಾವಿಗೆ ಸಂಘವೇ ಕಾರಣ. ಮೃತನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಹಾಗೂ ರಸ್ತೆ ದುರಸ್ತಿ ಮಾಡುವಂತೆ ಆಗ್ರಹಿಸಿರುವ ಗ್ರಾಮಸ್ಥರು ಸಂಘದ ಕಚೇರಿ ಎದುರು ಶವ ಇಟ್ಟು ಪ್ರತಿಭಟನೆ ನಡೆಸಿದರು.  ಬಿಡದಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಿಗಿ ಪೊಲೀಸ್​ ಬಂದೋಬಸ್ತ್​ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net