ಬೆಂ - ಮೈ ದಶಪಥ ಹೆದ್ದಾರಿ ಶೇಷಗಿರಿಹಳ್ಳಿ ಬಳಿ ಅಂಡರ್​ಪಾಸ್ ​ಶೀಘ್ರ ಕ್ರಮಕ್ಕೆ ಡಿಸಿ ಸೂಚನೆ

06-07-bidadi-1
Published on

ಬಿಡದಿ

ಬೆಂಗಳೂರು - ಮೈಸೂರು ಹೆದ್ದಾರಿ ಸಮಸ್ಯೆಗಳಿಗೆ ಮುಕ್ತಿ ಸಿಗುವ ಲಕ್ಷಣಗಳು ಕಂಡು ಬರುತ್ತಿಲ್ಲ. ಪ್ರತಿದಿನ ಹೆದ್ದಾರಿಯಲ್ಲಿನ ಸಮಸ್ಯೆಗಳನ್ನು ಅಧಿಕಾರಿಗಳು ವೀಕ್ಷಣೆ ಮಾಡುತ್ತಲೇ ಇದ್ದಾರೆ.

ಹೆದ್ದಾರಿಯಲ್ಲಿನ ಸಮಸ್ಯೆಗಳ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ರಾಮನಗರದ ಜಿಲ್ಲಾಧಿಕಾರಿ ಡಾ.ಅವಿನಾಶ್​ ಮೆನನ್​ ರಾಜೇಂದ್ರನ್​, ಪೊಲೀಸ್​ ವರಿಷ್ಠಾಧಿಕಾರಿ ಕಾರ್ತಿಕ್​ ರೆಡ್ಡಿ ಹಾಗೂ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ರಾಹುಲ್​ ಗುಪ್ತಾ ಮತ್ತಿತರ ಅಧಿಕಾರಿಗಳು ಶೇಷಗಿರಿಹಳ್ಳಿಗೆ ಗುರುವಾರ ಭೇಟಿ ನೀಡಿ ಸ್ಕೈ ವಾಕ್​ ಅಥವಾ ಅಂಡರ್​ಪಾಸ್​ ನಿರ್ಮಾಣಕ್ಕೆ ಜಾಗದ ಪರಿಶೀಲನೆ ಮಾಡಿದರು.

ಅಧಿಕಾರಿಗಳಿಗೆ ತಾಕೀತು

ಗ್ರಾಮದ ಬಳಿ ಅಂಡರ್​ಪಾಸ್​ ಇಲ್ಲದೆ ಜನರು ಹೆದ್ದಾರಿ ದಾಟಲು ಸಮಸ್ಯೆಪಡುತ್ತಿರುವುದನ್ನು ಕಂಡ ಜಿಲ್ಲಾಧಿಕಾರಿಗಳು ಇಲ್ಲಿ ಅಂಡರ್​ಪಾಸ್​ ಅವಶ್ಯಕತೆ ಇದ್ದು ಜನರು ಜಮೀನುಗಳಿಗೆ ಹೋಗಲು, ಶಾಲಾ ಮಕ್ಕಳು ಕಾಲೇಜು ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ಹಾಗಾಗಿ ಶ್ರೀವಾಗಿ ಅಂಡರ್​ಪಾಸ್​ ನಿರ್ಮಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಿ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ತಾಕೀತು ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net