ಬಿಡದಿ ಸರ್ಕಾರಿ ಪ್ರೌಢಶಾಲೆಯಲ್ಲಿ ಪರಿಸರ ಜಾಗೃತಿ

28-08-bidadi-1
Published on

ಬಿಡದಿ
ಶಾಲೆಗಳಲ್ಲಿ ಪರಿಸರ ಜಾಗೃತಿ ಸಾರುವ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) ಐಕೇರ್ ಕಾರ್ಯಕ್ರಮಗಳು ಮಕ್ಕಳಿಗೆ ಉತ್ತಮ ಆರೋಗ್ಯಕರ ಕಲಿಕಾ ವಾತಾವರಣ ನಿರ್ಮಿಸುತ್ತವೆ ಎಂದು ಜಿಲ್ಲಾಧಿಕಾರಿ ಡಾ.ಅವಿನಾಶ್ ಮೆನನ್ ರಾಜೇಂದ್ರನ್ ಹೇಳಿದರು.

ಬಿಡದಿ ಸರ್ಕಾರಿ ಪ್ರೌಢಶಾಲೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಟಿಕೆಎಂ 27ನೇ ಐಕೇರ್ ಕಾರ್ಯಕ್ರಮದಲ್ಲಿ ಮಾತನಾಡಿ, ಟಿಕೆಎಂನ ಗಮನಾರ್ಹ ಪ್ರಯತ್ನಗಳಿಗೆ ಐಕೇರ್ ಒಂದು ಉತ್ತಮ ಉದಾಹರಣೆ. ಇಲ್ಲಿನ ಸರ್ಕಾರಿ ಪ್ರೌಢಶಾಲೆಯ ಪರಿವರ್ತನೆಯು ಸಮುದಾಯ ಅಭಿವೃದ್ಧಿ ಮತ್ತು ಶಿಕ್ಷಣಕ್ಕೆ ಕೊಡುಗೆ ನೀಡುತ್ತದೆ. ಇಂತಹ ಪ್ರಯತ್ನಗಳು ಸೌಕರ್ಯವನ್ನು ಹೆಚ್ಚಿಸುವುದಲ್ಲದೆ ಪರಿಸರದ ಮಹತ್ವವನ್ನು ಸಾರಲಿದೆ ಎಂದರು.

ಸಂಸ್ಥೆಯ ಕಾರ್ಯನಿರ್ವಾಹಕ ಉಪಾಧ್ಯಕ್ಷ ವಿಕ್ರಮ್ ಗುಲಾಟಿ ಮಾತನಾಡಿ, 27ನೇ ಐಕೇರ್ ಚಟುವಟಿಕೆಯನ್ನು ಹಮ್ಮಿಕೊಂಡಿದ್ದು, ಮುಂದಿನ ಪೀಳಿಗೆಗೆ ಉಜ್ವಲ ಭವಿಷ್ಯ ಸೃಷ್ಟಿಸುವ ಬದ್ಧತೆಯ ಸಂಕೇತವಾಗಿದೆ. ಶಿಕ್ಷಣ, ಪರಿಸರ, ರಸ್ತೆ ಸುರಕ್ಷತೆ, ಕೌಶಲ ಅಭಿವೃದ್ಧಿ, ವಿಪತ್ತು ನಿರ್ವಹಣೆ ಮತ್ತು ವಿಶೇಷ ಮಕ್ಕಳಿಗೆ ಬೆಂಬಲವನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.

ಟಿಕೆಎಂ ಐಕೇರ್‌ನ ಸದಸ್ಯರು ಶಾಲೆಯ ಹೊರಾಂಗಣ, ಕಾರಿಡಾರ್ಸ್, ತರಗತಿ ಕೊಠಡಿಗಳು ಮತ್ತು ಗ್ರಿಲ್‌ಗಳನ್ನು ಪರಿಶೀಲಿಸಿದರು.
ಶಾಲಾ ಆವರಣದಲ್ಲಿ ಪ್ಲಾಸ್ಟಿಕ್ ಮುಕ್ತ ಪರಿಸರವನ್ನು ಪ್ರತಿಪಾದಿಸಿದರು, ಹಸಿರು ಪರಿಸರವನ್ನು ಕೇಂದ್ರೀಕರಿಸಿ ಸದಸ್ಯರು ಸಸಿಗಳನ್ನು ನೆಡುವ ಮೂಲಕ ಕಲಿಕೆಗೆ ಆರೋಗ್ಯಕರ ವಾತಾವರಣವನ್ನು ನಿರ್ಮಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net