

ಬಿಡದಿ
ಕನ್ನಡ ನಾಡು ನುಡಿ, ಜಾನಪದ ಅನುವಾದ, ಜೀವನ ಚರಿತ್ರೆ ಸಂಪಾದನೆ ಹೀಗೆ ಬಹುತೇಕ ಕ್ಷೇತ್ರಗಳಲ್ಲಿ ನಾಲ್ಕು ನೂರಕ್ಕೂ ಹೆಚ್ಚು ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನಾಡೋಜ ದೇ. ಜವರೇಗೌಡ ನೀಡಿದ್ದಾರೆ ಎಂದು ಜಾನಪದ ವಿದ್ವಾಂಸ ಡಾ.ಎಂ. ಬೈರೇಗೌಡ ತಿಳಿಸಿದರು.
ನಾಡಪ್ರಭು ಕೆಂಪೇಗೌಡ ಒಕ್ಕಲಿಗರ ಟ್ರಸ್ಟ್ ವತಿಯಿಂದ ಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ದೇ.ಜವರೇಗೌಡ ಅವರ 108ನೇ ಜಯಂತ್ಯುತ್ಸವ ಉದ್ಙಾಟಿಸಿ ಮಾತನಾಡಿದರು.
ಕೆಪಿಎಸ್ಸಿ ನಡೆಸುವ ವಿವಿಧ ಸರ್ಕಾರಿ ಹುದ್ದೆಗಳ ಸ್ಫರ್ಧಾತ್ಮಕ ಪರೀೆಗಳನ್ನು ಕನ್ನಡದಲ್ಲೂ ನಡೆಸಬೇಕೆಂದು ಧರಣಿ ನಡೆಸಿ ಜಾರಿಗೆ ತರಲು ಕಾರಣಕರ್ತರಾದವರು ದೇಜಗೌ ಎಂದು ಸ್ಮರಿಸಿದರು.
ಆಧುನಿಕ ಕನ್ನಡಭಾಷಾ ಬೆಳವಣಿಗೆ ಮತ್ತು ಅನುಷ್ಠ್ಠಾನಕ್ಕೆ ದೇಜಗೌ ಕೊಡುಗೆ ಅನನ್ಯವಾದದ್ದು. ಜಗತ್ತಿನ ಶ್ರೇಷ್ಠ ಸಾಹಿತ್ಯ ಕನ್ನಡ ಭಾಷೆಯಲ್ಲಿ ಕನ್ನಡಿಗರಿಗೆ ಸಿಗಬೇಕು. ಆ ಮೂಲಕ ಕನ್ನಡಿಗರ ಅಭಿರುಚಿ ಮತ್ತು ಸಂವೇದನೆ ಸೂಕ್ಷ್ಮವಾಗಬೇಕೆಂದು ಜೇನ್ ಆಸ್ಟಿನ್, ಲಿಯೋ ಟಾಲ್ಸ್ಟಾಯ್, ದೋಸ್ತಾವಸ್ಕಿ ಮುಂತಾದವರ ಮಹಾಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದು ದೇಜಗೌ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮುಖ್ಯಶಿಕ್ಷಕಿ ಸುಚಿತ್ರಾ ಕುಂಬಾರ್, ಕರ್ನಾಟಕ ಜನಸೈನ್ಯದ ಜಿಲ್ಲಾಧ್ಯಕ್ಷ ಪೊಲೀಸ್ ಶಿವಲಿಂಗಪ್ಪ, ಡಾ. ಭರತ್ ಕೆಂಪಣ್ಣ, ನಾಡಪ್ರಭು ಕೆಂಪೇಗೌಡ ಒಕ್ಕಲಿಗರ ಟ್ರಸ್ಟ್ ಅಧ್ಯಕ್ಷ ಲೋಕೇಶ್, ರಾಮನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಕೋಶಧ್ಯಕ್ಷ ಬಾನಂದೂರು ನಂಜುಂಡಿ, ಕಾರ್ಯಾಧ್ಯಕ್ಷ ನಿತ್ಯಾನಂದ, ನಾಡಪ್ರಭು ಕೆಂಪೇಗೌಡ ಒಕ್ಕಲಿಗರ ಟ್ರಸ್ಟ್ ಕಾರ್ಯದರ್ಶಿ ಜಗದೀಶ್, ಖಜಾಂಚಿ ಪಾರ್ಥ ಉಪಾಧ್ಯಕ್ಷರುಗಳಾದ ರವಿರಾಜ್, ಸಂದೀಪ್ ಸಂಟನಾ ಕಾರ್ಯದರ್ಶಿಗಳಾದ ಷಣ್ಮುಗ, ಬಸವರಾಜ್ ಸಂಚಾಲಕರಾದ ರಾಧಾಕೃಷ್ಣ, ಶಿವರಾಜ್ ಉಪಸ್ಥಿತರಿದ್ದರು.