ರಾಮನಗರದಲ್ಲಿ ಭಾರತ್ ವಿಕಾಸ್ ಪರಿಷತ್ ನಿಂದ ಉಚಿತ ಆರೋಗ್ಯ ಶಿಬಿರ

Rmgm-Ph-001-Bharath Vikash Parisath Valmiki Shake-Health and Eye Camp Ramanagara - 11-7-2023
Published on

ರಾಮನಗರ :ಮನುಷ್ಯಆರೋಗ್ಯವಾಗಿದ್ದಾಗ ಮಾತ್ರ ನೆಮ್ಮದಿಯ ಜೀವನ ನಡೆಸಿ ನಾಳೆಯ ದಿನಗಳನ್ನು ಸಂತೋಷವಾಗಿ ಕಾಣಬಹುದು ಎಂದು ಅವ್ವೇರಹಳ್ಳಿ ರೇವಣಸಿದ್ದೇಶ್ವರ ಬೆಟ್ಟದ ದಾಸೋಹ ಮಠದ ಶ್ರೀ ರಾಜಶೇಖರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಮಂಗಳವಾರ ಭಾರತ್ ವಿಕಾಸ ಪರಿಷತ್ ವಾಲ್ಮೀಖಿ ಶಾಖೆ, ರಾಮನಗರ ಚಂದ್ರಮ್ಮ ದಯಾನಂದ ಸಾಗರ್‌ ಆಸ್ಪತ್ರೆ ದೇವರ ಕಗ್ಗಲಹಳ್ಳಿ ಇವರ ಸಹಯೋಗದಲ್ಲಿ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರ, 121 ನೇ ಕಣ್ಣಿನ ಆರೋಗ್ಯ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.

ಜನರು ತಮ್ಮ ದಿನನಿತ್ಯದ ಕೆಲಸದ ಜಂಜಾಟದಲ್ಲಿ ಆರೋಗ್ಯದ ಕಡೆ ಲಕ್ಷ್ಯ ಆರೋಗ್ಯ ರಕ್ಷಣೆ ಬಹಳ ಮುಖ್ಯ. ಇಂತಹ ಸಮಯದಲ್ಲಿ ಭಾರತ್ ವಿಕಾಸ ಪರಿಷತ್ ಸೇವಾ ಮನೋಭಾವದಲ್ಲಿ ಪ್ರತೀ ತಿಂಗಳು ದಯಾನಂದ್ ಸಾಗರ್‌ ಆಸ್ಪತ್ರೆ ಸಹಕಾರದಲ್ಲಿ ಆರೋಗ್ಯ ಶಿಬಿರ, ಕಣ್ಣಿನ ಶಿಬಿರ ನಡೆಸುತ್ತಾ ಬಡವರ ಆರೋಗ್ಯ ರಕ್ಷಣೆಗೆ ಮುಂದಾಗಿರುವುದು ಉತ್ತಮಕಾರ್ಯವಾಗಿದೆ ಎಂದರು.

ನಗರಸಭೆ ಪೌರಾಯುಕ್ತ ನಾಗೇಶ್ ಮಾತನಾಡಿ ಮನುಷ್ಯನಿಗೆ ಆರೋಗ್ಯ ಅತೀ ಮುಖ್ಯ ಆರೋಗ್ಯ ಇದ್ದಾಗ ಮಾತ್ರ ಉತ್ತಮ ಜೀವನ ನಡೆಸಬಹುದು. ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಚಿಕಿತ್ಸೆ ದೊರೆಯುತ್ತದೆ ಆದರೆ ಮಾಹಿತಿ ಕೊರತೆಯಿಂದ ಕೆಲವು ಸಾರ್ವಜನಿಕರು ತಮ್ಮಲ್ಲಿ ಆರೋಗ್ಯ ಸಮಸ್ಯೆ ಇದ್ದರೂ ಆಸ್ಪತ್ರೆಗಳಿಗೆ ಹೋಗದೆ ಗಂಭೀರ ಆರೋಗ್ಯ ಸಮಸ್ಯೆಗೆ ಒಳಗಾಗುತ್ತಾರೆ.

ಶಿಬಿರದಲ್ಲಿ ಕಣ್ಣು, ಮೂಳೆ, ಸ್ತ್ರೀ ರೋಗತಜ್ಞರು ಭಾಗವಹಿಸಿ ಚಿಕಿತ್ಸೆ ಮಾಹಿತಿ ನೀಡಿದರು. ರೇಣುಕಾ ಟ್ರೇಡರ್ಸ್‌ನ ರಾಜಣ್ಣ ಶಿಬಿರದ ಪ್ರಾಯೋಜನೆ ಮಾಡಿದ್ದರು. ಹಿರಿಯ ವಕೀಲ ಶೇಷಾದ್ರಿ ಅಯ್ಯರ್, ಭಾರತ್ ವಿಕಾಸ್ ಪರಿಷತ್‌ ಅಧ್ಯಕ್ಷ ರಾ.ಶಿ.ಬಸವರಾಜು, ರೇಣುಕಾ ಟ್ರೇಡರ್ಸ್‌ನ ರಾಜಣ್ಣ ಮಾತನಾಡಿದರು.

ಕಾರ್ಯಕ್ರಮದಲ್ಲಿ ದಯಾನಂದ್ ಸಾಗರ್‌ ಆಸ್ಪತ್ರೆಯ ವೈದ್ಯ ಡಾ. ಭೈರರೆಡ್ಡಿ, ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಪೋಲೀಸ್ ಶಂಕರಪ್ಪ, ಕರುನಾಡ ಸೇನೆ ರಾಜ್ಯಉಪಾಧ್ಯಕ್ಷ ಐಜೂರು ಜಗದೀಶ್, ವಕೀಲ ಅಂಬರೀಶ್, ಆರೋಗ್ಯ ಸಂಚಾಲಕ ಕುಮಾರ್, ಕಾರ್ಯದರ್ಶಿ ಕೆ.ಎಚ್. ಚಂದ್ರಶೇಖರಯ್ಯ, ನಾಗಭೂಷಣ್, ಕೆಂಗಲ್ಲಯ್ಯ, ಪ್ರಕಾಶ್, ಶೇಷಗಿರಿ ರಾವ್, ಲಾವಣ್ಯ, ರಾಜು ಪ್ರಭು ಮುಂತಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net