ಮಾ.6ರಂದು ಬಿಜಿಎಸ್ ಭಕ್ತ ವೃಂದದಿಂದ ಅರವಂಟಿಗೆ

photo 010000
????????????????????????????????????
Published on

ರಾಮನಗರ: ಆದಿಚುಂಚನಗಿರಿ ಜಾತ್ರಾ ಮಹೋತ್ಸವದ ಪ್ರಯುಕ್ತ ನಗರದ ಕೆಎಸ್​ಆರ್​ಟಿಸಿ ಬಸ್​ ನಿಲ್ದಾಣದಲ್ಲಿ ಮಾ. 6ರ ಸೋಮವಾರದಂದು 9ನೇ ವರ್ಷದ ಅರವಂಟಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಬಿಜಿಎಸ್​ ಭಕ್ತವೃಂದ ತಿಳಿಸಿದೆ.

ರಾಮನಗರ ಶಾಖಾ ಮಠದ ಶ್ರೀ ಅನ್ನದಾನೇಶ್ವರಸ್ವಾಮೀಜಿ ಅವರ ನೇತೃತ್ವದಲ್ಲಿ ರಾಮನಗರ ಜಿಲ್ಲಾ ಬಿಜಿಎಸ್​ ಭಕ್ತವೃಂದ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ನೌಕರರ ಕುಟುಂಬ ಕ್ಷೇಮಾಭಿವೃದ್ದಿ ಸಂಘ ಹಾಗೂ ರಾಮನಗರ ವಿಭಾಗದ ಕೆಎಸ್​ಆರ್​ಟಿಸಿ ನೌಕರರ ಬಳಗದ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿದೆ. ಸೋಮವಾರ ಬೆಳಿಗ್ಗೆ 9 ಗಂಟೆಗೆ ವಿಶೇಷ ಪೂಜೆ, ನಂತರ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನೆರವೇರಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲೆಯ ಭಕ್ತಾಧಿಗಳು ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

ಅರವಂಟಿಗೆಗೆ ಸಹಕಾರ ನೀಡುವ ಭಕ್ತಾಧಿಗಳು 9902969122, 9901232995, 7899969433 ಸಂಖ್ಯೆಗಳಿಗೆ ಕರೆ ಮಾಡಿ ನೆರವು ನೀಡಬಹುದಾಗಿದೆ.

ಜಾತ್ರಾ ವಿಶೇಷ ಬಸ್​ ವ್ಯವಸ್ಥೆ: ಆದಿಚುಂಚನಗಿರಿಯಲ್ಲಿ ಮಾ.7ರ ಬೆಳಗಿನ ಜಾವ ನಡೆಯುವ ಶ್ರೀ ಗಂಗಾಧರೇಶ್ವರಸ್ವಾಮಿ ರಥೋತ್ಸವಕ್ಕೆ ತೆರಳುವ ಜಿಲ್ಲೆಯ ಭಕ್ತಾಧಿಗಳಿಗೆ ಅನುಕೂಲವಾಗುವಂತೆ ಜಿಲ್ಲಾ ಕೇಂದ್ರ ರಾಮನಗರದಿಂದ ಆದಿಚುಂಚನಗಿರಿ ಕ್ಷೇತ್ರಕ್ಕೆ ಹೋಗಲು ಮತ್ತು ಆದಿಚುಂಚನಗಿರಿ ಕ್ಷೇತ್ರದಿಂದ ವಾಪಸ್ಸು ಬರಲು ಅನುಕೂಲವಾಗುವಂತೆ ಕೆಎಸ್​ಆರ್​ಟಿಸಿ ವತಿಯಿಂದ ಜಾತ್ರಾ ವಿಶೇಷ ಬಸ್ಸುಗಳ ಸೌಕರ್ಯವನ್ನು ಕಲ್ಪಿಸಿದ್ದು, ಮಾ.6ರ ಬೆಳಿಗ್ಗೆ 6.30 ಗಂಟೆಯಿಂದ ರಾತ್ರಿ 9.30 ರವರಗೆ ಪ್ರತಿ 30 ನಿಮಿಷಕ್ಕೊಂದರಂತೆ ವಿಶೇಷ ಬಸ್​ ಸಂಚಾರ ಇರಲಿದ್ದು, ಜಾತ್ರೆಗೆ ತೆರಳುವ ಭಕ್ತರು ಇದರ ಸದುಪಯೋಗಪಡಿಸಿಕೊಳ್ಳುವಂತೆ ವಿಭಾಗೀಯ ನಿಯಂತ್ರಣಾಧಿಕಾರಿ ಎಂ.ಜಗದೀಶ್​ ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net