ಯರೇಹಳ್ಳಿ ಮಂಜು ಬಿಡಿಸಿಸಿ ಬ್ಯಾಂಕ್ ನೂತನ ಉಪಾಧ್ಯಕ್ಷ

bdcc1
Published on

ರಾಮನಗರ: ಬೆಂಗಳೂರು ನಗರ, ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಗಳನ್ನು ಒಳಗೊಂಡ ಬೆಂಗಳೂರು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನ ನೂತನ ಉಪಾಧ್ಯಕ್ಷರಾಗಿ ರಾಮನಗರ ತಾಲೂಕಿನ ಯರೇಹಳ್ಳಿ ಮಂಜು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಗುರುವಾರ ನಡೆದ ಚುನಾವಣೆಯಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತರಾದ ಮಂಜು ಹೊರತುಪಡಿಸಿ ಉಳಿದ ಯಾರೂ ನಾಮಪತ್ರ ಸಲ್ಲಿಕೆ ಮಾಡದ ಕಾರಣದಿಂದಾಗಿ ಇವರ ಅವಿರೋಧ ಆಯ್ಕೆಯನ್ನು ಚುನಾವಣಾಧಿಕಾರಿ ಘೋಷಣೆ ಮಾಡಿದರು.

ಪಟ್ಟಾಭಿರಾಮಯ್ಯ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಗುರುವಾರ ಚುನಾವಣೆ ನಿಗಧಿ ಆಗಿತ್ತು. ಡಿ.ಕೆ.ಶಿವಕುಮಾರ್, ಸಂಸದ ಸುರೇಶ್, ಲಿಂಗಪ್ಪ, ಬಾಲಕೃಷ್ಣ ಹಾಗೂ ಎಸ್.ರವಿ ಮತ್ತು ಎಚ್.ಎನ್.ಅಶೋಕ್ ಅವರ ಸಹಕಾರದೊಂದಿಗೆ ಮಂಜುನಾಥ್ ಅವರಿಗೆ ಉಪಾಧ್ಯಕ್ಷ ಪಟ್ಟ ಒಲಿದಿದ್ದು, ಜಿಲ್ಲೆಯ ರೈತರ ಒಳಿತಿಗಾಗಿ ಶ್ರಮಿಸುವುದಾಗಿ ಮಂಜು ತಮ್ಮ ಆಯ್ಕೆ ನಂತರ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net