ನಿಷೇಧಿತ ವಾಹನಗಳಿಗೆ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ದಂಡ ಪ್ರಯೋಗ

unnamed (2)
Published on

ರಾಮನಗರ: ಬೆಂಗಳೂರು - ಮೈಸೂರು ಹೆದ್ದಾರಿಯಲ್ಲಿ ದ್ವಿಚಕ್ರ, ತ್ರಿಚಕ್ರ ಸೇರಿದಂತೆ ಕೆಲವು ವಾಹನಗಳಿಗೆ ಆ.1ರಿಂದ ನಿಷೇಧ ಹೇರಿರುವ ನಡುವೆಯೇ, ನಿಯಮ ಮೀರಿದ ವಾಹನ ಸವಾರರಿಗೆ ದಂಡ ವಿಧಿಸುವ ಕೆಲಸವೂ ಆರಂಭಗೊಂಡಿದೆ.

ಜಿಲ್ಲಾ ಪೊಲೀಸ್ ವ್ಯಾಪ್ತಿಯ ಕಣಮಿಣಿಕೆ ಟೋಲ್ ಪ್ಲಾಜಾದಿಂದ ಆರಂಭಗೊಂಡು ಬೈರಾಪಟ್ಟಣದ ಸಮೀಪದ ಸಂಕಲಗೆರೆ ಗೇಟ್ ವರೆಗೂ ಇರುವ ವಿವಿಧ ಎಂಟ್ರಿ ಮತ್ತು ಎಕ್ಟಿಟ್ ಗಳನ್ನು ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದ್ದು, ದ್ವಿಚಕ್ರ ಮತ್ತು ತ್ರಿಚಕ್ತ ವಾಹನಗಳು ದಶಪಥದಲ್ಲಿ ಸಂಚರಿಸದಂತೆ ಕ್ರಮವಹಿಸಲಾಗಿದೆ.

ಇದರ ಹೊರತಾಗಿಯೂ ದಶಪಥದಲ್ಲಿಯೇ ಬರುವ ವಾಹನಗಳಿಗೆ ಕೆಲವು ಕಡೆಗಳಲ್ಲಿ ತಿಳುವಳಿಕೆ ನೀಡುವ ಕೆಲಸ ನಡೆಯುತ್ತಿದ್ದರೆ ಮತ್ತೆ ಕೆಲವು ಕಡೆಗಳಲ್ಲಿ 500 ರೂ ದಂಢ ವಿಧಿಸಲಾಗುತ್ತಿದೆ. ಇನ್ನು ಕೆಲವು ವಾಹನ ಸವಾರರಿಗೆ ಸಂಚಾರ ನಿಷೇಧ ಮಾಹಿತಿ ಇಲ್ಲದೇ ಹೆದ್ದಾರಿಯಲ್ಲೇ ಸಂಚಾರ ಮಾಡುತ್ತಿದ್ದು, ದಂಡ ವಿಧಿಸಲು ಬರುವ ಪೊಲೀಸ್ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸುತ್ತಿರುವ ದೃಶ್ಯಗಳು ಕಂಡು ಬಂದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net