ದಶಪಥದಲ್ಲಿ ಸಂಚಾರ ನಿಮಯ ಉಲ್ಲಂಘನೆ 789 ಪ್ರಕರಣ ದಾಖಲು

news-5-1-10-lane-Mysuru-Bengaluru-Highway
Published on

ರಾಮನಗರ: ಬೆಂಗಳೂರು ಮೈಸೂರು ದಶಪಥ ಹೆದ್ದಾರಿಯಲ್ಲಿ ಅಪಘಾತ ಪ್ರಮಾಣವನ್ನು ಕಡಿಮೆ ಮಾಡುವ ಕಾರ್ಯಾಚರಣೆ ನಡೆಸುತ್ತಿರುವ ರಾಮನಗರ ಪೊಲೀಸರು ಶನಿವಾರದ ಅಂತ್ಯಕ್ಕೆ ಒಟ್ಟು 789 ಪ್ರಕರಣ ದಾಖಲು ಮಾಡಿದ್ದಾರೆ.

ಅತಿ ವೇಗ ಹಾಗೂ ಸಂಚಾರ ನಿಯಮಗಳನ್ನು ಉಲ್ಲಂಘನೆ ಮಾಡತ್ತಿರುವುದರಿಂದಲೇ ದಶಪಥ ಹೆದ್ದಾರಿಯಲ್ಲಿ ಅಪಘಾತ ಪ್ರಕರಣಗಳು ಹೆಚ್ಚಾಗಲು ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು -ಮೈಸೂರು ಹೆದ್ದಾರಿಯಲ್ಲಿ ರಾಮನಗರ ಪೊಲೀಸರ ವಿಶೇಷ ಕಾರ್ಯಾಚರಣೆ ಕೈಗೊಂಡಿದ್ದಾರೆ.

ರಾಮನಗರ ಜಿಲ್ಲಾ ಪೊಲೀಸ್​ ವ್ಯಾಪ್ತಿಯಲ್ಲಿ ನಡೆದಿರುವ ಈ ಕಾರ್ಯಾಚರಣೆಯಲ್ಲಿ ಶನಿವಾರದ ಅಂತ್ಯಕ್ಕೆ ಒಟ್ಟು 789 ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳನ್ನು ದಾಖಲು ಮಾಡಿದ್ದಾರೆ.

ಓವರ್​ ಸ್ಪೀಡ್​  -304 ಪ್ರಕರಣಗಳು, ಲೇನ್​ ಡಿಸಿಪ್ಲೀನ್​ ಉಲ್ಲಂಘನೆ - 222 ಪ್ರಕರಣಗಳು, ಸೀಟ್​ ಬೆಲ್ಟ್​ ಹಾಕದಿದ್ದಕ್ಕೆ  -120 ಪ್ರಕರಣಗಳು ಹಾಗೂ ಹೆಲ್ಮೆಟ್​ ರಹಿತ ಪ್ರಯಾಣಕ್ಕೆ 63 ಪ್ರಕರಣ ಹಾಗೂ ಇತರೆ -81 ಪ್ರಕರಣ ದಾಖಲು ಮಾಡಲಾಗಿದೆ. ಇನ್ನು ಮುಂದೆ ಪ್ರತಿನಿತ್ಯ ಹೈವೆಯಲ್ಲಿ ವಿಶೇಷ ಕಾರ್ಯಾಚರಣೆಯನ್ನು ರಾಮನಗರ ಪೊಲೀಸರು ನಡೆಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net