ಬಮುಲ್​ ಅಧ್ಯಕ್ಷ ನರಸಿಂಹಮೂರ್ತಿ ರಾಜೀನಾಮೆ ಅಂಗೀಕಾರ ಬಿರುಸುಗೊಂಡ ನೂತನ ಅಧ್ಯಕ್ಷರ ಆಯ್ಕೆ

unnamed
Published on

 ರಾಮನಗರ

ಬೆಂಗಳೂರು ಹಾಲು ಒಕ್ಕೂಟದ (ಬಮುಲ್​) ಅಧ್ಯಕ್ಷ ಸ್ಥಾನಕ್ಕೆ ಮಾಗಡಿಯ ನರಸಿಂಹಮೂರ್ತಿ ರಾಜೀನಾಮೆ ನೀಡಿದ್ದು, ನೂತನ ಸಾರಥಿ ನೇಮಕಕ್ಕೆ ಸಿದ್ಧತೆ ನಡೆದಿದೆ.

ಮಾಗಡಿ ಎಂಪಿಸಿಎಸ್​ ವ್ಯಾಪ್ತಿಯಿಂದ ನಿರ್ದೇಶಕರಾಗಿದ್ದ ನರಸಿಂಹಮೂರ್ತಿ ಅವರು ಜೂ.16ರಂದು ರಾಜೀನಾಮೆ ನೀಡಿದ್ದು, ನಿಯಮದಂತೆ 15 ದಿನಗಳ ಒಳಗೆ ರಾಜೀನಾಮೆ ಅಂಗೀಕಾರವಾಗಿದೆ. ತೆರವಾದ ಸ್ಥಾನಕ್ಕೆ ನೂತನ ಅಧ್ಯಕ್ಷರ ಆಯ್ಕೆ ಬಿರುಸುಗೊಂಡಿದೆ.

ಪ್ರಮುಖವಾಗಿ ಕನಕಪುರದಿಂದ ಬಮುಲ್​ಗೆ ನಿರ್ದೇಶಕರಾಗಿರುವ ರಾಜ್​ ಕುಮಾರ್​ ಹೆಸರು ಮುಂಚೂಣಿಯಲ್ಲಿದೆ. ಈ ನಡುವೆ ಬೆಂಗಳೂರು ಉತ್ತರ ಕ್ಷೇತ್ರದಿಂದ ಆಯ್ಕೆಯಾಗಿರುವ ನಿರ್ದೇಶಕ ಕೇಶವಮೂರ್ತಿ ಅವರ ನಡುವೆ ಪೈಪೋಟಿ ಏರ್ಪಟ್ಟಿದೆ. ಬಮುಲ್​ ಅಧ್ಯಕ್ಷ ಸ್ಥಾನಕ್ಕೆ ಕನಕಪುರ ಕ್ಷೇತ್ರದವರೇ ಆದ ರಾಜ್​ಕುಮಾರ್​ ಅವರನ್ನೇ ನೇಮಕ ಮಾಡಿಕೊಳ್ಳಬೇಕು ಎನ್ನುವ ಇರಾದೆ ಡಿ.ಕೆ.ಸಹೋದರರಲ್ಲಿ ಇದೆ. ಯಾರು ಅಧ್ಯಕ್ಷ ಸ್ಥಾನ ಅಲಂಕರಿಸಲಿದ್ದಾರೆ ಎನ್ನುವ ಕುತೂಹಲ ಮೂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net