ರೇಷ್ಮೆ ಎಳೆಯಲ್ಲಿ ಅರಳಿದ ಶಾಸಕ ಬಾಲಕೃಷ್ಣ ಭಾವಚಿತ್ರ

13 RMN-MGD P3
Published on

ಮಾಗಡಿ

ಅಭಿಮಾನಿಗಳು ನೆಚ್ಚಿನ ನಟ, ನಟಿಯರಿಗೆ ವಿಶೇಷ ಉಡುಗೊರೆ ಕೊಡುವುದು ಸಾಮಾನ್ಯ. ಆದರೆ ಪಟ್ಟಣದ ತಿರುಮಲೆ ಗ್ರಾಮದ ಸುರೇಶ್ ಎಂಬುವವರು ರೇಷ್ಮೆ ಎಳೆಯಲ್ಲಿ ಶಾಸಕ ಎಚ್.ಸಿ.ಬಾಲಕೃಷ್ಣ ಅವರ ಭಾವಚಿತ್ರ ನೇಯ್ದು ಸ್ವಾತಂತ್ರ್ಯ ದಿನಾಚರಣೆಗೆ ಉಡುಗೊರೆಯಾಗಿ ನೀಡಿದ್ದಾರೆ.

ಸುರೇಶ್ ಶಾಸಕರ ಅಭಿಮಾನಿಯಾಗಿದ್ದು, ರೇಷ್ಮೆ ನೇಯ್ಗೆ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ತಮ್ಮ ಮೆಚ್ಚಿನ ಅಭಿಮಾನಕ್ಕೆ ರೇಷ್ಮೆ ಎಳೆಯಿಂದ ಸುಂದರ ಭಾವಚಿತ್ರ ಹೆಣೆದಿರುವ ಫೋಟೋ ವೈರಲ್ ಆಗಿದೆ.

ಎಚ್.ಸಿ.ಬಾಲಕೃಷ್ಣ ಅವರು ನೆಚ್ಚಿನ ನಾಯಕರಾಗಿದ್ದಾರೆ. ಅವರ ಮೇಲಿನ ಪ್ರೀತಿಗಾಗಿ ಇಂಥ ಪ್ರಯತ್ನ ನಡೆಸಿದ್ದೇನೆ. ರೇಷ್ಮೆ ಎಳೆಯಲ್ಲಿ ಭಾವಚಿತ್ರ ಹೆಣೆಯುವುದು ಕಷ್ಟವಾದರೂ ಸಾಹಸ ಮಾಡಿದ್ದೇನೆ. ಇದರಿಂದ ಅವರ ಮೇಲಿನ ಪ್ರೀತಿ ಮತ್ತಷ್ಟು ಹೆಚ್ಚಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net