

ಕೈಲಾಂಚ(ರಾಮನಗರ): ಅಂಗನವಾಡಿ ಕಟ್ಟಡದಲ್ಲಿ ನೆಲಕ್ಕೆ ಅಳವಡಿಸಿರುವ ಟೈಲ್ಸ್‌ಗಳು ಒಂದೊಂದೇ ಕಿತ್ತುಬರುತ್ತಿದ್ದು, ಮಕ್ಕಳಿಗೆ ಕುಳೀತುಕೊಳ್ಳಲು ತೊಂದರೆಯಾಗುತ್ತಿದೆ. ಕೂಡಲೇ ಸಂಬಂಧಪಟ್ಟವರು ಸಮಸ್ಯೆ ಬಗೆಹರಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಕೆ.ಜಿ. ಹೊಸಹಳ್ಳಿ ಗ್ರಾಮದ ಅಂಗನವಾಡಿ ಕೇಂದ್ರ 2018-19 ರಲ್ಲಿ ಉದ್ಘಾಟನೆ ಕಂಡಿದೆ. ಉದ್ಘಾಟನೆ ಕಂಡ ಒಂದೆರಡು ವರ್ಷಗಳಲ್ಲೇ ನೆಲಕ್ಕೆ ಹಾಸಿದ್ದ ಟೈಲ್ಸ್ ಕಿತ್ತುಬರುತ್ತಿದೆ. ನೆಲದ ಒಳಗಿಂದ ಗೊದ್ದ, ಇರುವೆಗಳು ಹರಿದಾಡುತ್ತವೆ.
ಮಕ್ಕಳು ಮಧ್ಯಾಹ್ನದ ವೇಳೆಯಲ್ಲಿ ಮಲಗಲು ಆಗುತ್ತಿಲ್ಲ. ಜತೆಗೆ ಟೈಲ್ಸ್‌ಗಳ ಚೂರು ಏಳುತ್ತಿರುವ ಕಾರಣ ಮಕ್ಕಳ ಕಾಲಿಗೆ ತಾಗದಂತೆ ಪ್ರತಿನಿತ್ಯ ಜೋಪಾನ ವಾಡಬೇಕಿದೆ. ಸ್ವಲ್ಪ ಯಾವಾರಿದರೂ ಮಕ್ಕಳು ಗಾಯಗೊಳ್ಳುವುದು ನಿಶ್ಚಿತ. ಸಂಬಂಧಪಟ್ಟವರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಕೂಡಲೇ ಕಿತ್ತು ಬರುತ್ತಿರುವ ಟೈಲ್ಸ್ ತೆಗೆದು ಹೊಸ ಟೈಲ್ಸ್ ಅಳವಡಿಸಬೇಕು. ಮಕ್ಕಳಿಗೆ ಸಮಸ್ಯೆ ಆಗುವುದನ್ನು ತಪ್ಪಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.