ನಗರಸಭೆ ಆಯುಕ್ತರ ಕಾರಿಗೆ ಮಹಿಳೆ ಬಲಿ

Lorry, collision, two, death,
Published on

ರಾಮನಗರ:
ನಗರಸಭೆ ಆಯುಕ್ತರು ಚಲಾಯಿಸುತ್ತಿದ್ದ ಕಾರು ಬೈಕಿಗೆ ಡಿಕ್ಕಿ ಹೊಡೆದು ಮಹಿಳೆ ಒಬ್ಬರು ಮೃತಪಟ್ಟಿರುವ ಘಟನೆ ರಾಮನಗರದಲ್ಲಿ ಮಂಗಳವಾರ ನಡೆದಿದೆ.

ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ನಗರಸಭೆ ಆಯುಕ್ತ ನಾಗೇಶ್ ಚಲಾಯಿಸುತ್ತಿದ್ದ ಕಾರು ಬೈಕಿಗೆ ಡಿಕ್ಕಿ ಹೊಡೆದಿದೆ ಹಿಂಬದಿ ಕುಳಿತಿದ್ದ ಸಿದ್ದಿಕ್ ಅಂಜುಮ್ ಎಂಬ 22 ವರ್ಷದ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ. 

ಬೈಕ್ ಚಲಾಯಿಸುತ್ತಿದ್ದ ವ್ಯಕ್ತಿಗೆ ಗಂಭೀರ ಗಾಯವಾಗಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ . ಈ ಸಂಬಂಧ ಪ್ರಕರಣ ದಾಖಲು ಮಾಡಿಕೊಂಡಿರುವ ರಾಮನಗರ ಸಂಚಾರಿ ಪೊಲೀಸರು ನಗರಸಭೆ ಆಯುಕ್ತರ ಕಾರನ್ನು ವಶಕ್ಕೆ ಪಡೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net