

ರಾಮನಗರ: ಮನೆ ಪಾಠ ಮುಗಿಸಿ ಬರುತ್ತಿದ್ದ ಮಕ್ಕಳ ಮೇಲೆ ಲಜೇಜ್ ಟೆಂಪೋ ಹರಿದು ಇಬ್ಬರು ಮಕ್ಕಳು ಮೃತಪಟ್ಟು, ಗಾಯಗೊಂಡಿದ್ದ ಮೂವರು ಮಕ್ಕಳ ಪೈಕೆ ಓರ್ವ ಬಾಲಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.
ಆ.9ರ ರಾತ್ರಿ ಮನೆ ಪಾಠ ಮುಗಿಸಿ ತಮ್ಮ ಮನೆಗಳಿಗೆ ಬರುತ್ತಿದ್ದ ವೇಳೆ ತಾಲೂಕಿನ ಲಕ್ಷ್ಮೀಪುರ ಗೊಲ್ಲರದೊಡ್ಡಿ ಸಮೀಪ ಲಗೇಜ್ ಟೆಂಪೋ ಡಿಕ್ಕಿಯೊಡೆದು ಗ್ರಾಮದ ಶಾಲಿನಿ (8) ಮತ್ತು ರೋಹಿತ್ (8) ಮೃತಪಟ್ಟಿದ್ದರು. ಸುಚಿತ್, ಗೌತಮಿ, ಹಾಗೂ ಲೇಖನ್ ತೀವ್ರಗಾಗಿ ಗಾಯಗೊಂಡು ಇವರನ್ನು ಬೆಂಗಳೂರಿನ ವಿವಿಧ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಇವರಲ್ಲಿ ಸುಚಿತ್ (10) ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.