

ವಿಭೂತಿಕೆರೆ ಶಿವಲಿಂಗಯ್ಯ ರಾಮನಗರ
ಒಂಬತ್ತು ತಿಂಗಳ ಹಿಂದೆ ಕಾಣೆಯಾಗಿದ್ದ ರಾಮನಗರ ತಾಲೂಕಿನ ಕಸಬಾ ಹೋಬಳಿಯ ಕಟಮಾನ ದೊಡ್ಡಿ ಗ್ರಾಮದ ಯುವಕನೊಬ್ಬ ಸವಾಜ ಸೇವಕಿ ಕವಿತಾರಾವ್ ಅವರ ಸಹಕಾರದಿಂದ ಮನೆ ಸೇರಿದ್ದು ರಂಜಾನ್ ವಾಸಾಚರಣೆಯ ಮೊದಲ ದಿನವೇ ಮಗ ಮನೆಗೆ ಮರಳಿದ್ದು ಕುಟುಂಬದವರಲ್ಲಿ ಸಂತಸ ತಂದಿದೆ.
ಸದ್ದಾಂ ಮನೆಗೆ ವಾಪಸಾದ ಯುವಕ.
ಚಿಕ್ಕಂದಿನಿಂದಲೇ ಮಾನಸಿಕ ರೋಗಿಯಾಗಿದ್ದ ಸದ್ದಾಂನನ್ನು ಮನೆಯವರು ಎಲ್ಲಿಗೆ ಹೋದರೂ ಜತೆಯಲ್ಲಿಯೇ ಕರೆದುಕೊಂಡು ಹೋಗುತ್ತಿದ್ದರು. ಒಂಬತ್ತು ತಿಂಗಳ ಹಿಂದೆ ತಾಯಿ ಹಸೀನಾ ಬೇಗಂ, ಅಣ್ಣ ಹುಸೇನ್ ಜತೆ ಚಿಂತಾಮಣಿ ತಾಲೂಕಿನ ಮುರುಗಮಲ್ಲಾಗೆ ಹೋಗಿದ್ದ ವೇಳೆ ಸದ್ದಾಂ ತಪ್ಪಿಸಿಕೊಂಡಿದ್ದ. ಎರಡು ದಿನ ಅಲ್ಲೇ ಇದ್ದು ಹುಡುಕಾಡಿದರೂ ಸಿಗದೆ ವಾಪಸಾಗಿದ್ದರು. ಮುರುಗಮಲ್ಲ ರೈಲು ನಿಲ್ದಾಣದ ಸಮೀಪ ಬಳಿ ಅಸ್ವಸ್ಥಗೊಂಡಿದ್ದ ಸದ್ದಾಂನನ್ನು ಕಂಡ ರೈಲ್ವೆ ಪೊಲೀಸರು ಸ್ಥಳೀಯ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದರು. ನಂತರ ಅಲ್ಲಿಂದ ಬೆಂಗಳೂರಿನ ಬನ್ನೇರುಟ್ಟದಲ್ಲಿರುವ ಎವಿಎಂ ಆಸ್ಪತ್ರೆಗೆ ಚಿಕಿತ್ಸೆ ಮತ್ತು ವಸತಿಗಾಗಿ ಸೇರಿಸಲಾಗಿತ್ತು. ಸತತ ಆರೇಳು ತಿಂಗಳ ಚಿಕಿತ್ಸೆ ನಂತರ ಸದ್ದಾಂ ಗುಣಮುಖನಾಗಿದ್ದ.
ಈ ಸಂದರ್ಭದಲ್ಲಿ ರಾಮನಗರ ತಾಲೂಕಿನ ಕಷ್ಣಾಪುರದೊಡ್ಡಿ ಗ್ರಾಮದಲ್ಲಿ ವದ್ಧಾಶ್ರಮ ನಡೆಸುತ್ತಿರುವ ಸವಾಜ ಸೇವಕಿ ಕವಿತಾರಾವ್ ಅವರು ತಮ್ಮ ಆಶ್ರಮದಲ್ಲಿದ್ದ ಒಂದಿಬ್ಬರಿಗೆ ಮಾನಸಿಕ ಚಿಕಿತ್ಸೆ ಅವಶ್ಯವಿದ್ದ ಕಾರಣ ಎವಿಎಂ ಆಸ್ಪತ್ರೆಗೆ 2 ದಿನಗಳ ಹಿಂದೆ ತೆರಳಿದ್ದಾಗ, ಆಸ್ಪತ್ರೆ ಆಡಳಿತ ಮಂಡಳಿಯವರು ಸದ್ದಾಂ ರಾಮನಗರದ ವಿಳಾಸ ಹೇಳುತ್ತಾನೆ ಎಂದು ತಿಳಿಸಿದಾಗ, ಕವಿತಾರಾವ್ ಸದ್ದಾಂ ಬಳಿ ವಾತನಾಡಿ ಆತ ಹೇಳಿದಂತೆ ಗ್ರಾಮ, ತಂದೆ, ತಾಯಿ ಹೆಸರನ್ನು ತಿಳಿದುಕೊಂಡು ವಾಟ್ಸ್‌ಆ್ಯಪ್‌ನಲ್ಲಿ ಗುರುವಾರ ಸಂಜೆ ಮಾಹಿತಿ ಹರಿಬಿಟ್ಟರು. ಒಂದೆರಡು ಗಂಟೆಗಳಲ್ಲಿಯೇ ಆತ ರಾಮನಗರ ತಾಲೂಕಿನ ಕಟಮಾನ ದೊಡ್ಡಿ ಗ್ರಾಮದವನು ಎಂದು ತಿಳಿಯಿತು. ಕವಿತಾರಾವ್ ಅವರು ಸದ್ದಾಂ ಮನೆಯವರಿಗೆ ಆಸ್ಪತ್ರೆ ವಿಳಾಸ ತಿಳಿಸಿ ಆತನನ್ನು ಶುಕ್ರವಾರ ಮನೆ ಸೇರಿಸುವಲ್ಲಿ ಸಫಲರಾದರು. ಕವಿತಾರಾವ್ ಅವರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮುರುಗಮಲ್ಲಾದಲ್ಲಿ ತಪ್ಪಿಸಿಕೊಂಡ ದಿನದಿಂದ ಆತನನ್ನು ಹುಡುಕದ ಜಾಗವಿಲ್ಲ. ಚಿಂತಾಮಣಿ ಠಾಣೆಯಲ್ಲೂ ಸದ್ದಾಂ ಹುಡುಕಿಕೊಡುವಂತೆ ಮನವಿ ವಾಡಲಾಗಿತ್ತು. ರಂಜಾನ್ ಆರಂಭದ ದಿನದಂದು ಮಗ ಮನೆಗೆ ವಾಪಸ್ ಬಂದಿರುವುದು ಸಂತಸ ತಂದಿದೆ.
ಹಸೀನಾ ಬೇಗಂ, ಸದ್ದಾಂ ತಾಯಿ
ನಮ್ಮ ವದ್ಧಾಶ್ರಮದ ಇಬ್ಬರಿಗೆ ಬನ್ನೇರುಟ್ಟದ ಎವಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲು ಹೋಗಿದ್ದಾಗ ಸದ್ದಾಂ ಬಗ್ಗೆ ತಿಳಿಯಿತು. ಆತನ ಪಾಲಕರನ್ನು ಪತ್ತೆ ಹಚ್ಚಲು ಸಾವಾಜಿಕ ಜಾಲತಾಣ ಬಳಸಿದೆ. ಅದರ ಫಲವಾಗಿ ಇಂದು ಆತ ಹೆತ್ತವರ ಮಡಿಲು ಸೇರಿದ್ದಾನೆ. ಇದು ಖುಷಿಯ ವಿಚಾರ.
ಕವಿತಾರಾವ್, ಸವಾಜಸೇವಕಿ, ಕಷ್ಣಾಪುರದೊಡ್ಡಿ.