ರಾಮನಗರದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ವಿಜ್ಞಾನ ದಿನ ಆಚರಣೆ

28-02-rama-Science
Published on

ರಾಮನಗರ: ನಗರದ ಹೊರ ವಲಯದಲ್ಲಿರುವ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಗ್ನೈಟ್ ಸಂಸ್ಥೆವತಿಯಿಂದ ರಾಷ್ಟ್ರೀಯ ವಿಜ್ಞಾನ ದಿನವನ್ನು ಆಚರಿಸಲಾಯಿತು.

ಈ ವೇಳೆ ಮಾತನಾಡಿದ ಇಗ್ನೈಟ್‌ನ ರಾಮನಗರ ಸಂಚಾಲಕಿ ಅಪೂರ್ವ, ವಿಜ್ಞಾನ ಜೀವನ ನಡೆಸುವ ಮಾರ್ಗವಾಗಬೇಕು, ಮನುಷ್ಯನ ಯೋಚನೆ ಲಹರಿಯಾಗಬೇಕು, ವ್ಯಕ್ತಿಯನ್ನು ಗಟ್ಟಿಮಾಡಬೇಕು.ವಿಜ್ಞಾನ ಎಂಬುದು ಪ್ರಯೋಗ ಶಾಲೆಗೆ, ಪುಸ್ತಕಕ್ಕೆ ಸೀಮಿತವಾಗಿಲ್ಲ, ಅದು ಮಾನವೀಯತೆಯಿಂದ ಮೆರೆದಿದೆ. ವಿಜ್ಞಾನಕ್ಕೆ ಯಾವುದೇ ಗಡಿಯಿಲ್ಲ. ವಿಜ್ಞಾನ ಸಮಾಜವನ್ನು ಪ್ರಗತಿ ಎಡೆಗೆ ಕರೆದೂಯುತ್ತದ್ದೆ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ವಿಜ್ಞಾನದ ಮಹತ್ವವನ್ನು ತಿಳಿದುಕೊಂಡು ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.

ಇದೇ ವೇಳೆ ಮಾತನಾಡಿದ ಕಾಲೇಜಿನ ಕಾಲೇಜಿನ ಪ್ರಾಂಶುಪಾಲರಾದ ಡಾ. ಚಂದ್ರಪ್ಪ, ಈ ದೇಶ ಮತ್ತು ವಿಜ್ಞಾನ ಕ್ಷೇತ್ರ ಕಂಡ ಮಹಾನ್ ವಿಜ್ಞಾನಿ ಸರ್ ಸಿ.ವಿ.ರಾಮನ್ ಅವರು ಒಮ್ಮೆ ಹಡಗಿನಲ್ಲಿ ಪ್ರಯಾಣಿಸುವಾಗ ಸಮುದ್ರದ ನೀರು ಏಕೆ ಯಾವಾಗಲೂ ನೀಲಿಯಾಗಿರುತ್ತದೆ ಎನ್ನುವ ಪ್ರಶ್ನೆ ಹುಟ್ಟಿಕೊಂಡಿದೆ. ಇದರ ಜಾಡು ಹಿಡಿದ ರಾಮನ್ ಅವರು, ಸೂರ್ಯನ ಬೆಳಕು ನೀರಿನಲ್ಲಿ ಚದುರಿಹೋಗುವುದೇ ಸಮುದ್ರದ ನೀರು ನೀಲಿಯಾಗಿ ಕಾಣಲು ಕಾರಣ ಎನ್ನುವುದನ್ನು ಕಂಡು ಹಿಡಿದರು. ನಂತರ ಕೋಲ್ಕತಾದಲ್ಲಿ ತಮ್ಮ ಸಹೋದ್ಯೋಗಿಗಳ ಜೊತೆ ನಡೆಸಿದ ಅಧ್ಯಯನಗಳ ಮೂಲಕ ರಾಮನ್ ಎಫೆಕ್ಟ್ ಕಂಡು ಹಿಡಿದರು. ಇದೇ ಸಾಧನೆಗಾಗಿ ಅವರಿಗೆ 1930ರಲ್ಲಿ ಅವರಿಗೆ ನೊಬೆಲ್ ಪುರಸ್ಕಾರ ದೊರೆಯಿತು. ಇದು ವಿಜ್ಞಾನ ಕ್ಷೇತ್ರದಲ್ಲಿ ಭಾರತಕ್ಕೆ ದೊರೆತ ಮೊದಲ ನೊಬೆಲ್ ಪುರಸ್ಕಾರ . ಇದರ ಗೌರವಾರ್ಥವಾಗಿ ಪ್ರತಿ ವರ್ಷ ಫೆ.28ನ್ನು ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ ಎಂದರು.

ಇಗ್ನೈಟ್‌ನ ರಾಜ್ಯ ಸಂಚಾಲಕ ಅಭಯ ದಿವಾಕರ್ ಮಾತನಾಡಿ, ಸಿ.ವಿ.ರಾಮನ್ ರವರ ರಾಮನ್ ಎಫೆಕ್ಟ್ ಕುರಿತು, ಪ್ರಫುಲ್ಲ ಚಂದ್ರ ರೇ ರವರ ಜೀವನ ಸಂಘರ್ಷದ ಕುರಿತು, ಸಂಶೋದನೆ ಮತ್ತು ಸ್ವಾತಂತ್ರ್ಯಪೂರ್ವ ಹೋರಾಟದಲ್ಲಿ ಅವರ ಭಾಗವಹಿಸುವಿಕೆಯ ಕುರಿತು ಮಾತನಾಡಿದರು. ಈ ವೇಳೆ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗ ಇತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net