ರಾಮನಗರ ಜಿಲ್ಲೆಯ ಮೊದಲ ಕೊರೊನಾ ಕೇಸ್ ಪತ್ತೆ

Covid
Published on

ಬಿಡದಿ: ಕೇರಳದಲ್ಲಿ (Kerala) ಕೊರೊನಾ ರೂಪಾಂತರಿ JN.1 ಕೇಸ್ (Corona JN.1 Case) ಪತ್ತೆಯಾದ ಬೆನ್ನಲ್ಲೇ ಜಿಲ್ಲೆಯಲ್ಲಿ ಮೊದಲ ಕೊರೊನಾ ಕೇಸ್ ಪತ್ತೆಯಾಗಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ. ರಾಮನಗರ ಜಿಲ್ಲೆಯಲ್ಲಿ ಮೊದಲ ಕೊರೋನಾ ಕೇಸ್ ಪತ್ತೆಯಾಗಿದೆ.

ಬೈರಮಂಗಲ ಗ್ರಾಮದಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ‌ ಮೊದಲ ಕೇಸ್ ಪತ್ತೆಯಾಗಿದೆ. ವರುಣ್ 22 ವರ್ಷ ಸೋಂಕಿತ ವಿದ್ಯಾರ್ಥಿಯಾಗಿದ್ದು, ಈತ ತಿಮ್ಮೆಗೌಡನದೊಡ್ಡಿ ಬಳಿ ಇರುವ ಅಮೃತ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡುತ್ತಿದ್ದಾನೆ.

ಈತನಿಗೆ ಕೊರೋನಾ ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಕೋವಿಡ್ ಟೆಸ್ಟ್ ಮಾಡಲಾಗಿತ್ತು. ಟೆಸ್ಟ್ ವೇಳೆ ಕೊರೋನಾ ಪಾಸಿಟಿವ್ ಬಂದಿದೆ.

ವರುಣ್ ಗೆ ಎರಡು‌ ದಿನದ ಐಸೋಲೇಶನ್ ಗೆ ಒಳಪಡಿಸಿ ಚಿಕಿತ್ಸೆ ನೀಡಲಾಗುತ್ತಿದೆ ಈ ಬಗ್ಗೆ ಜಿಲ್ಲಾ ವೈದ್ಯಾಧಿಕಾರಿ ಡಾ. ನಿರಂಜನ್ ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net