ಹಾಡ ಹಗಲೇ ಮನೆ ಬೀಗ ಮುರಿದು ಕಳವು ಕಗ್ಗಲೀಪುರದ ದೊಡ್ಡಿಪಾಳ್ಯದಲ್ಲಿ ಘಟನೆ

theft
Published on

ರಾಮನಗರ: ಹಾಡಹಗಲೇ ಮನೆ ಬಾಗಿಲು ಮುರಿದು ನಗ ನಗದು ದೋಚಿರುವ ಪ್ರಕರಣ ಕಗ್ಗಲೀಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಬೆಂಗಳೂರು ದಕ್ಷಿಣ ತಾಲೂಕಿನ ಅಗರ ಗ್ರಾಪಂ ವ್ಯಾಪ್ತಿಯ ದೊಡ್ಡಿ ಪಾಳ್ಯದ ಮುನಿ ನರಸಪ್ಪ ಮತ್ತು ಕಮಲಮ್ಮ ಅವರ ಮನೆಯಲ್ಲಿ ಕಳುವಾಗಿದೆ.

ಬುಧವಾರ ಮಧ್ಯಾಹ್ನ ತಮ್ಮ ಮನೆ ಹಿಂದೆ ಇರುವ ಹೊಲದಲ್ಲಿ ಕಮಲಮ್ಮ ಕೆಲಸ ಮಾಡುತ್ತಿದ್ದಾಗ ಮನೆಯಲ್ಲಿ ಶಬ್ಧವಾಗಿದ್ದು, ತಕ್ಷಣವೇ ಬಂದು ನೋಡಲಾಗಿ ಮನೆಯ ಹಿಂಭಾಗಿಲನ್ನು ಮುರಿದು, ಮನೆಯ ಬೀರುವಿನಲ್ಲಿದ್ದ 1.5 ಲಕ್ಷ ರು ಹಣ, ಒಂದು ನೆಕ್ಲೆಸ್, ಮಾಂಗಲ್ಯ ಸರ ಮತ್ತು 3 ಉಂಗುರಗಳನ್ನು ಕಳವು ಮಾಡಲಾಗಿದೆ.

ಶಬ್ದ ಕೇಳಿದಾಗ ಮನೆಗೆ ಬಂದು ನೋಡಲಾಗಿ, ಈ ವೇಳೆ ಇದೇ ಗ್ರಾಮದ ದೀಪು ಎಂಬಾತ ಓಡಿ ಹೋಗುತ್ತಿರುವುದನ್ನು ಕಮಲಮ್ಮ ಹಾಗೂ ರಶ್ಮಿತ ಎನ್ನುವರು ನೋಡಿದ್ದು, ಕಳುವನ್ನು ಈತನೇ ಮಾಡಿದ್ದಾನೆ ಎನ್ನುವ ಅನುಮಾನವನ್ನು ಸಹ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಕಗ್ಗಲೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net