ವರ್ಕ್ ಫ್ರಂ ಹೋಂ ಹೆಸರಲ್ಲಿ ವಂಚನೆ 82 ಸಾವಿರ ರೂಪಾಯಿ ಕಳೆದುಕೊಂಡ ಯುವತಿ

Cyber Crime
Published on

ಬಿಡದಿ

ವರ್ಕ್ ಫ್ರಂ ಹೋಮ್ ಹೆಸರಿನಲ್ಲಿ ಪಟ್ಟಣದ ಇಂದಿರಾ ನಗರದ ಯುವತಿಗೆ ಸಾವಿರಾರು ರೂಪಾಯಿ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ. ಇಂದಿರಾ ನಗರದ ನಿವಾಸಿ ಚೈತ್ರಾ ವಂಚನೆಗೊಳಗಾದವರು. ರಾಮನಗರದ ಸಿಇಎನ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ.

ದೂರು ನೀಡಿರುವ ಚೈತ್ರಾ ಅವರು ಮೊಬೈಲ್ ಇನ್‌ಸ್ಟಾಗ್ರಾಂ ನೋಡುತ್ತಿದ್ದಾಗ ವರ್ಕ್ ಫ್ರಂ ಹೋಮ್ ಎಂಬ ಲಿಂಕ್ ಬಂದಿದೆ. ಲಿಂಕ್ ಓಪನ್ ವಾಡಿದಾಗ ಟೆಲಿಗ್ರಾಮ್ ಗ್ರೂಪ್ ಓಪನ್ ಆಗಿ 300 ರೂ. ರಿಚಾರ್ಜ್ ವಾಡಲು ಕೇಳಿದೆ. ಇವರು ಗೂಗಲ್ ಪೇ ಮೂಲಕ ಅವರು ನೀಡಿದ ಯುಪಿಐ ಐಡಿಗೆ ಹಣ ಕಳುಹಿಸಿದ್ದಾರೆ. ನಂತರ ಅದೇ ಗ್ರೂಪ್‌ನಲ್ಲಿ ನಿಮಗೆ ಕೆಲ ಟಾಸ್ಕ್ ಗಳನ್ನು ನೀಡಲಾಗುತ್ತದೆ. ಅವುಗಳನ್ನು ಕಂಪ್ಲೀಟ್ ವಾಡಿದ ನಂತರ ಹೆಚ್ಚುವರಿ ಹಣ ಸೇರಿಸಿ ನೀಡಲಾಗುತ್ತದೆ ಎಂದು 450 ರೂ. ನೀಡಿದ್ದರು. ತದನಂತರ 500, 651, 1276 ಸೇರಿ ಒಟ್ಟು 82,567 ರೂ. ಹಾಕಿಸಿಕೊಂಡು ವಂಚನೆ ಮಾಡಲಾಗಿದೆ ಎಂದು ದೂರಿನಲ್ಲಿ ವಿವರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net