ಶ್ರೀ ರಾಮನ ಮೂರ್ತಿ ಪುರ ಪ್ರವೇಶ

New Project (5)
Published on

ಉಪ್ಪಿನಂಗಡಿ: ಕನ್ನಡ ಮಾತೃಭಾಷಾ ಶಿಕ್ಷಣ ಹಾಗೂ ಸಂಸ್ಕಾರ ಶಿಕ್ಷಣದಿಂದ ಗಮನ ಸೆಳೆದಿರುವ ಉಪ್ಪಿನಂಗಡಿಯ ವೇದಶಂಕರ ನಗರದ ಶ್ರೀ ರಾಮ ಶಾಲೆಯಲ್ಲಿ ಜ.22ರಂದು ಸ್ಥಾಪನೆಗೊಳ್ಳಲಿರುವ ಹನುಮಂತ ಸಹಿತ ಶ್ರೀ ರಾಮನ ಮೂರ್ತಿಯ ಪುರ ಪ್ರವೇಶ ಕಾರ್ಯಕ್ರಮ ಗುರುವಾರ ಭವ್ಯ ಮೆರವಣಿಗೆಯೊಂದಿಗೆ ನಡೆಯಿತು.

ವಿಗ್ರಹವನ್ನು ಶ್ರೀ ಸಹಸ್ರಲಿಂಗೇಶ್ವರ ದೇವಾಲಯದ ವಠಾರದಿಂದ ನೂರಾರು ವಿದ್ಯಾರ್ಥಿಗಳ ಜಯಘೋಷದೊಂದಿಗೆ ಮೆರವಣಿಗೆಯಲ್ಲಿ ಶಾಲಾ ಆವರಣಕ್ಕೆ ತರಲಾಯಿತು. ಶ್ರೀ ರಾಮ ಶಾಲಾ ಆಡಳಿತದ ಅಧ್ಯಕ್ಷ ಸುನೀಲ್ ಅನಾವು, ವಿಶ್ವ ಹಿಂದು ಪರಿಷತ್ ಅಧ್ಯಕ್ಷ ಸುದರ್ಶನ, ಗೆಳೆಯರು 94 ಸಂಘಟನೆಯ ಅಧ್ಯಕ್ಷ ರಾಧಾಕೃಷ್ಣ ಬೊಳ್ಳಾವು, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಕೆ.ಸುಧಾಕರ ಶೆಟ್ಟಿ, ಶ್ರೀ ಮಾಧವ ಶಿಶು ಮಂದಿರ ಸಮಿತಿ ಅಧ್ಯಕ್ಷ ಮನೋಜ್ ಶೆಟ್ಟಿ, ಪ್ರಮುಖರಾದ ಯು.ಜಿ.ರಾಧಾ, ಸುರೇಶ್ ಜಿ., ಸುಧೀರ್ ವನಸುಮ, ಗುಣಕರ ಅಗ್ನಾಡಿ, ಗಣೇಶ್ ಕುಲಾಲ್, ರವೀಂದ್ರ ಆಚಾರ್ಯ, ಕಂಗ್ವೆ ವಿಶ್ವನಾಥ ಶೆಟ್ಟಿ, ಹರಿರಾಮಚಂದ್ರ, ಜಯಶ್ರೀ ಜನಾರ್ದನ್, ಭವ್ಯ, ಲೋಕೇಶ್ ಆಚಾರ್ಯ, ಕಿಶೋರ್ ನೀರಕಟ್ಟೆ, ಅಶೋಕ್ ಕುಮಾರ್ ರೈ ಎ., ಸುರೇಶ್ ಅತ್ರಮಜಲು, ಬಾಲಕೃಷ್ಣ, ವಿದ್ಯಾಧರ ಜೈನ್, ಉದಯ ಅತ್ರಮಜಲು, ಗೀತಾಲಕ್ಷ್ಮೀ ತಾಳ್ತಜೆ, ಕೈಲಾರ್ ರಾಜಗೋಪಾಲ ಭಟ್, ಅನುರಾಧ ಆರ್.ರೈ, ಜಯಂತ ಪೊರೋಳಿ ಮೊದಲಾದವರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net