ರಾಮಕೃಷ್ಣ ಸೇವಾಶ್ರಮದ ಜಪಾನಂದ ಶ್ರೀಗಳಿಂದ ದೇವರ ಎತ್ತುಗಳಿಗೆ ಮೇವು ಪೂರೈಕೆ

252
Published on

ಚಳ್ಳಕೆರೆ: ತಾಲೂಕಿನ ಚಿಕ್ಕಮ್ಮನಹಳ್ಳಿ ಸಮೀಪದ ಮಂದಬೊಮ್ಮದೇವರ ಹಟ್ಟಿಯ ದೇವರ ಎತ್ತುಗಳಿಗೆ ಶ್ರೀರಾಮಕೃಷ್ಣ ಸೇವಾಶ್ರಮದ ಜಪಾನಂದ ಸ್ವಾಮೀಜಿ ಗುರುವಾರ ಒಂದು ಲೋಡ್ ಮೇವು ವಿತರಣೆ ಮಾಡಿದರು.

ಈ ವೇಳೆ ಮಾತನಾಡಿದ ಶ್ರೀಗಳೂ, ಮಂದಬೊಮ್ಮದೇವರ ಹಟ್ಟಿಯಲ್ಲಿರುವ 60 ದೇವರ ಎತ್ತುಗಳು ಸೇರಿ ನನ್ನಿವಾಳ, ಬಂಗಾರದೇವರಹಟ್ಟಿ ಭಾಗದಲ್ಲಿ ಬುಡಕಟ್ಟು ಆಚರಣಾ ಪದ್ಧತಿಯಲ್ಲಿ ಪೋಷಿಸುತ್ತಿರುವ ಸಾವಿರಾರು ದೇವರ ಎತ್ತುಗಳಿವೆ ಎಂದರು.

ಆಧುನಿಕ ಕಾಲದಲ್ಲೂ ದೇವರ ಎತ್ತುಗಳಲ್ಲಿ ಸಾಕ್ಷಾತ್ ಭಗವಂತನ ದರ್ಶನ ಕಾಣುತ್ತೇವೆ ಎನ್ನುವ ನಂಬಿಕೆ ಬುಡಕಟ್ಟು ಜನರಲ್ಲಿ ಇದೆ. ಚಪ್ಪಲಿ ತೊಡದೆ, ಮೈಗೆ ಬಟ್ಟೆ ಹಾಕಿಕೊಳ್ಳದೆ ಕಂಬಳಿ ಹಾಕಿಕೊಂಡು, ಪತ್ತೇವು ಊಟ ಮಾಡಿಕೊಂಡು ಎತ್ತುಗಳನ್ನು ಪೋಷಣೆ ಮಾಡುತ್ತಿರುವ ಕಿಲಾರಿಗಳ ಭಕ್ತಿ ಕಾರ್ಯಕ್ಕೆ ಸಹಕಾರ ಸಿಗಬೇಕಿದೆ ಎಂದು ತಿಳಿಸಿದರು.

ಸರ್ಕಾರದಿಂದ ಆರಂಭಿಸಿರುವ ಗೋಶಾಲೆಗಳು ಊರ ಎತ್ತುಗಳ ಜತೆಗೆ ಈ ಎತ್ತುಗಳನ್ನು ಸೇರಿಸಲು ಸಾಧ್ಯವಾಗುತ್ತಿಲ್ಲ. ಇದನ್ನು ಅಧಿಕಾರಿಗಳು ಮನನ ಮಾಡಿಕೊಂಡು ದೇವರ ಎತ್ತುಗಳಿಗೆ ಪ್ರತ್ಯೇಕ ಮೇವಿನ ವ್ಯವಸ್ಥೆ ಕಲ್ಪಿಸಬೇಕು. ಇಲ್ಲವೆ ಮೇವಿನ ಬ್ಯಾಂಕ್ ಸ್ಥಾಪಿಸಿ ನಿರ್ಧಿಷ್ಟ ದರ ನಿಗದಿಪಡಿಸಿ ಕೆಜಿ ಲೆಕ್ಕದಲ್ಲಾದರೂ ವಿತರಣೆಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಪ್ರಾಧ್ಯಾಪಕ ಓಬಣ್ಣ, ಮಂಜಣ್ಣ, ಸಿ.ಪಿ.ಮಹೇಶ್, ರಾಜಣ್ಣ, ಬೋರಯ್ಯ, ಚಿನ್ನಯ್ಯ, ಪಾಲಯ್ಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net