ಜ.1ರಿಂದ ರಾಮಕೃಷ್ಣ ಮಠದಲ್ಲಿ ವಾರ್ಷಿಕೋತ್ಸವ: 12ರಂದು ರಾಷ್ಟ್ರೀಯ ಯುವ ದಿನಾಚರಣೆ

Ramakrishna Matt
Published on

ಬೆಂಗಳೂರು: ಬಸವನಗುಡಿಯ ರಾಮಕೃಷ್ಣ ಮಠದಲ್ಲಿ ಬುಧವಾರದಿಂದ (ಜ.1) ಹನ್ನೊಂದು ದಿನಗಳ ಕಾಲ ಶ್ರೀ ರಾಮಕೃಷ್ಣ ವಿವೇಕಾನಂದ ಹಾಗೂ ಮಾತೆ ಶಾರದಾ ದೇವಿಯವರ ವಾರ್ಷಿಕ ಜನ್ಮದಿನೋತ್ಸವ ನಡೆಯಲಿದೆ. 12ರಂದು ರಾಷ್ಟ್ರೀಯ ಯುವ ದಿನ ಆಚರಿಸಲಾಗುತ್ತದೆ.

ವಾರ್ಷಿಕೋತ್ಸವದ ಭಾಗವಾಗಿ ಮಠದ ವತಿಯಿಂದ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. 5ರಂದು ವಿದ್ವಾನ್ ಡಾ. ಎಸ್.ಪಿ. ಗುರುದಾಸ್ ಅವರು ಹರಿಕಥೆ ನಡೆಸಿಕೊಡಲಿದ್ದಾರೆ. 6ರಂದು ವಿದ್ವಾನ್ ಕೆ. ಗುರುರಾಜ್ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ, 7ರಂದು ದಿವಾಕರ್ ಹೆಗಡೆ ಅವರಿಂದ ಏಕವ್ಯಕ್ತಿ ತಾಳಮದ್ದಲೆ ಇರಲಿದೆ. 8ರಂದು ಪಂ. ರವೀಂದ್ರ ಯಾವಗಲ್ ಹಾಗೂ ವಿದ್ವಾನ್ ಆನೂರು ಅನಂತ ಕೃಷ್ಣ ಶರ್ಮಾ ಅವರು ತಬಲಾ- ಮೃದಂಗ ಜುಗಲ್ಬಂದಿ ನಡೆಸಿಕೊಡುವರು. ವಯೋಲಿನ್ ಲೆಹ್ರದಲ್ಲಿ ವಿದ್ವಾನ್ ರಂಜನ್‌ಕುಮಾರ್ ಸಾಥ್ ನೀಡಲಿದ್ದಾರೆ. 9ರಂದು ದೇಬಾಂಜನಿ ದತ್ತ ಹಾಗೂ ಸಂಗಡಿಗರು ಭಕ್ತಿ ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. 10ರಂದು ವಿದ್ವಾನ್ ಭಾರ್ಗವ ಅವರು ಕರ್ನಾಟಕ ಶಾಸ್ತ್ರೀಯ ಸಂಗೀತ ಪ್ರಸ್ತುತಪಡಿಸುವರು. ಮೃದಂಗದಲ್ಲಿ ವಿದ್ವಾನ್ ನಾಗೇಂದ್ರಪ್ರಸಾದ್, ವಯೋಲಿನ್‌ನಲ್ಲಿ ಅಚ್ಯುತ್‌ರಾವ್ ಸಾಥ್ ನೀಡಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net