ರಮಜಾನ್ ಸೌಹಾರ್ದ ಸಂಕೇತ

kota
Published on

ವಿಜಯವಾಣಿ ಸುದ್ದಿಜಾಲ ಕೋಟ

ರಮಜಾನ್ ಸೌಹಾರ್ದದ ಜತೆ ಸಾಮರಸ್ಯ ಬೆಸೆಯುವ ಹಬ್ಬ ಎಂದು ಕೋಟ ಸೇಂಟ್ ಜೋಸೆಫ್ ಚರ್ಚ್ ಧರ್ಮಗುರು ಫಾ.ಸ್ಟಾೃನಿ ತಾವ್ರೋ ಹೇಳಿದರು.

ಕೋಟ ಜಾಮಿಯಾ ಮಸೀದಿ ಆಶ್ರಯದಲ್ಲಿ ರಮಜಾನ್ ಅಂಗವಾಗಿ ಆಯೋಜಿಸಲಾಗಿದ್ದ ಸೌಹಾರ್ದ ಈದ್ ಮಿಲನ ರಮಜಾನ್- 2025 ಕಾರ್ಯಕ್ರಮದಲ್ಲಿ ಮಾತನಾಡಿದರು.

ಮುಸ್ಲಿಂ ಬಾಂಧವ್ಯ ವೇದಿಕೆ ಕರ್ನಾಟಕ ಸಂಚಾಲಕ ಮುಸ್ತಾಕ್ ಹೆನ್ನೆಬೈಲ್ ಈದ್ ಸಂದೇಶ ನೀಡಿ, ಧರ್ಮಗಳು ಸಂಶೋಧನೆಗೆ ಒಳಗಾಗಬೇಕು. ಯಾವ ಧರ್ಮವೂ ಹಿಂಸೆ ಒಪ್ಪುವುದಿಲ್ಲ. ಸಮಾಜದಲ್ಲಿ ಸದಾ ಶಾಂತಿ ಬಯಸುವ ಮೂಲಕ ಧರ್ಮಗಳು ಸಹಬಾಳ್ವೆ ನಡೆಸುವಂತಾಗಬೇಕು. ಇಡೀ ವಿಶ್ವದಲ್ಲಿ ಶಾಂತಿಪ್ರಿಯರು ಹಿಂದು ಧರ್ಮದವರಾಗಿದ್ದು, ಅಂತಹ ಸಮುದಾಯದ ನಡುವೆ ನಾವು ರಮಜಾನ್ ಆಚರಿಸುತ್ತಿರುವುದು ಸಂತೃಪ್ತಿ ತಂದಿದೆ ಎಂದರು.

ಹಿಂದು ಸಮುದಾಯ ಸೇರಿದಂತೆ ವಿವಿಧ ಧರ್ಮದ ಅನಾರೋಗ್ಯ ಪೀಡಿತರನ್ನು ಗುರುತಿಸಿ ಸಹಾಯಹಸ್ತ ನೀಡಲಾಯಿತು. ಕೋಟ ಜಾಮಿಯಾ ಮಸೀದಿ ಉಪಾಧ್ಯಕ್ಷ ವಾಹಿದ್ ಆಲಿ ಅಧ್ಯಕ್ಷತೆ ವಹಿಸಿದ್ದರು. ಕೋಟತಟ್ಟು ಗ್ರಾಪಂ ಅಧ್ಯಕ್ಷ ಸತೀಶ್ ಕುಂದರ್, ಕೋಟ ಪಂಚಾಯಿತಿ ಸದಸ್ಯ ಚಂದ್ರ ಪೂಜಾರಿ, ಕೋಟ ಜಾಮಿಯಾ ಮಸೀದಿ ಧರ್ಮಗುರು ಮೌಲಾನ ಮೋಮಿನ್ ಅಶ್ಭಕ್ ಉಪಸ್ಥಿತರಿದ್ದರು. ಮಸೀದಿ ಕಾರ್ಯದರ್ಶಿ ಅಬ್ದುಲ್ ಬಷೀರ್ ಸಾಹೇಬ್ ಸ್ವಾಗತಿಸಿದರು. ಮಾಜಿ ಅಧ್ಯಕ್ಷ ಇಬ್ರಾಹಿಂ ಸಾಹೇಬ್ ಕೋಟ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net