ಕಿಕ್ಕೇರಿಯಲ್ಲಿ ರಾಮನವಮಿ ಆಚರಣೆ

ಕಿಕ್ಕೇರಿಯಲ್ಲಿ ರಾಮನವಮಿ ಆಚರಣೆ
Published on

ಕಿಕ್ಕೇರಿ: ಮರ್ಯಾದ ಪುರುಷೋತ್ತಮ ರಾಮನ ಆದರ್ಶ, ಸಹೋದರ ಪ್ರೀತಿ, ಸರಳತೆ ಎಲ್ಲವನ್ನು ಪಾಲಿಸಿದರೆ ಬದುಕು ಪಾವನವಾಗಲಿದೆ ಎಂದು ವೇದಬ್ರಹ್ಮಶ್ರೀ ಅನಿಲ್‌ಶಾಸ್ತ್ರಿ ಹೇಳಿದರು.

ಇಲ್ಲಿನ ವಿಪ್ರ ಬಾಂಧವ ಸೇವಾ ಸಮಿತಿಯಿಂದ ಶನಿವಾರ ಜರುಗಿದ ರಾಮನವಮಿಯ 9ನೇ ದಿನದ ವಿಶೇಷ ಪೂಜೆಯಲ್ಲಿ ರಾಮದೇವರ ಚರಿತ್ರೆ ಕುರಿತು ವಿಶೇಷ ಉಪನ್ಯಾಸ ನೀಡಿ, ರಾಮರಾಜ್ಯವಾಗಲು ನಮ್ಮಲ್ಲಿನ ತಾಮಸಗುಣ ಮರೆತು ಆದರ್ಶ, ಸರಳ ಗುಣವನ್ನು ಪಾಲಿಸಬೇಕು ಎಂದರು.

ನಿತ್ಯ ಬೆಳಗ್ಗೆ, ಸಂಜೆ ರಾಮನಾಮ ಪಾರಾಯಣ, ರಾಮತಾರಕ ನಾಮ ಪಠಣೆ, ಉಪನ್ಯಾಸ, ಪಂಚಾಮೃತ ಅಭಿಷೇಕ, ಮಂಗಳದ್ರವ್ಯಗಳಿಂದ ಆರಾಧನೆ, ಮಹಿಳೆಯರಿಂದ ಭಜನೆ, ಕೀರ್ತನೆ, ಧೂಪ, ದೀಪ ಪೂಜೆ, ನೈವೇದ್ಯ ಸಮರ್ಪಣೆ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ನಡೆಯಿತು. ಪಟ್ಟಾಭಿರಾಮದೇವರ ಭಾವಚಿತ್ರಕ್ಕೆ ಸುಗಂಧ ಪುಷ್ಪಗಳ ಅಲಂಕಾರ, ಪುಷ್ಪಾರ್ಚನೆ ಸೇವೆಯಂತಹ ಹಲವು ಪೂಜಾ ಕೈಂಕರ್ಯಗಳು ಜರುಗಿದವು.
ಅನಂತಸ್ವಾಮಿ, ಕೆ.ಬಿ. ವೆಂಕಟೇಶ್, ಮಹಬಲಶರ್ಮ, ಗಣೇಶ್‌ರಾವ್, ಮಹಬಲರಾವ್, ಪ್ರಭಾಕರ್, ಅನಿಲ್‌ಶಾಸ್ತ್ರೀ, ಗೌರಿಶಂಕರ್, ಕೆ.ಎಸ್. ಪರಮೇಶ್ವರಯ್ಯ, ಶ್ರೀಹರಿ, ಶಂಕರ್, ನರಸಿಂಹ, ಮಧು, ಸುಮಾ, ಗಿರಿಜಾ, ವೇದಾವತಿ, ಅನುರಾಧ, ವಿಜಯಲಕ್ಷ್ಮೀ, ರತ್ನಮ್ಮ, ನಂದಿನಿ, ಕಲಾವತಿ, ಶಶಿಕಲಾ, ರಜಿನಿ, ಸ್ವರ್ಣ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net